ರಾಜಕೀಯ

ಸೀಟು ಹಂಚಿಕೆ ಆಯ್ತು: ಜೆಡಿಎಸ್-ಕಾಂಗ್ರೆಸ್ ಮುಂದಿರುವ ಬಹುದೊಡ್ಡ ಸವಾಲು ಮತ ವರ್ಗಾವಣೆ!

Sumana Upadhyaya
ಬೆಂಗಳೂರು: ಹಲವು ದಿನಗಳ ಹಗ್ಗ ಜಗ್ಗಾಟದ ನಂತರ ಕೊನೆಗೂ ಲೋಕಸಭೆ ಚುನಾವಣೆ ಸ್ಪರ್ಧೆಗೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಗೆ ಬಂದಿದೆ. ಆದರೆ ಅದಕ್ಕಿಂತ ದೊಡ್ಡ ಸವಾಲು ಈಗಿರುವುದು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಕಡೆಗೆ ಮತದಾರರನ್ನು ಸೆಳೆದುಕೊಳ್ಳುವುದು.
ತಳಮಟ್ಟದಲ್ಲಿ ಕಾರ್ಯಕರ್ತರಿಗೆ ಎರಡೂ ಪಕ್ಷಗಳ ಪ್ರಮುಖ ನಾಯಕರು ಯಾವ ರೀತಿ ಸಂದೇಶ ಕಳುಹಿಸುತ್ತಾರೆ ಎಂಬುದರ ಮೇಲೆ ಅಭ್ಯರ್ಥಿಗಳ ಗೆಲುವು ನಿರ್ಧರಿತವಾಗಲಿದೆ ಎನ್ನುತ್ತಾರೆ ವಿಶ್ಲೇಷಕರು.
ಮಂಡ್ಯ, ತುಮಕೂರು, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳು ಜೆಡಿಎಸ್ ಅಭ್ಯರ್ಥಿಗಳಿಗೆ ಸಿಗಬೇಕು, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಥಳೀಯ ಪಕ್ಷದ ಮತಗಳನ್ನು ಅವಲಂಬಿಸಿಕೊಂಡಿದೆ. ಈ ಹಿಂದೆ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಸ್ಪರ್ಧೆಯಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ತಮ್ಮ ಪಕ್ಷದ ಕಾರ್ಯಕರ್ತರ ಮನವೊಲಿಸುವುದು ಅಷ್ಟು ಸುಲಭವಲ್ಲ.
ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ ನ ಎಲ್ಲಾ ಮತಗಳು ಸಿಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಿಂದ ಇಲ್ಲಿಯವರೆಗೆ ವೀರಪ್ಪ ಮೊಯ್ಲಿಯವರು ಚುನಾವಣೆಗೆ ನಿಲ್ಲುತ್ತಿದ್ದರು. 2014ರಲ್ಲಿ ವೀರಪ್ಪ ಮೊಯ್ಲಿಯವರು ಬಿಜೆಪಿಯ ಬಿಎನ್ ಬಚ್ಚೇಗೌಡ ಅವರಿಂದ 9 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಜೆಡಿಎಸ್ ನಿಂದ ಆಗ ಸ್ಪರ್ಧಿಸಿದ್ದ ಹೆಚ್ ಡಿ ಕುಮಾರಸ್ವಾಮಿಯವರು 3,46,339 ಮತಗಳನ್ನು ಪಡೆದಿದ್ದರು. ಈ ಬಾರಿ ಮೊಯ್ಲಿಯವರು ಕುಮಾರಸ್ವಾಮಿಯವರ ಬೆಂಬಲಕ್ಕೆ ಕಾಯುತ್ತಿದ್ದಾರೆ.
SCROLL FOR NEXT