ರಾಜಕೀಯ

ಫೇಸ್ ಬುಕ್ ನಲ್ಲಿ ಗೋಡ್ಸೆ ಗುಣಗಾನ: ತುಮಕೂರು ಬಿಜೆಪಿ ಯುವ ಘಟಕದ ಅಧ್ಯಕ್ಷ ಅಮಾನತು

Raghavendra Adiga
ತುಮಕೂರು: ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಮಹಾನ್ ದೇಶಭಕ್ತ ಎಂದು ಪೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದ ತುಮಕೂರು ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ  ಟಿ ಎಚ್ ಹನುಮಂತರಾಜ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.ತುಮಕೂರು ಶಾಸಕ ಜಿ. ಬಿ. ಜ್ಯೋತಿಗಣೇಶ್ ಅವರ ಶಿಫಾರಸ್ಸಿನ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯುವ ನಾಯಕನನ್ನು ವಜಾಗೊಳಿಸಿದ್ದಾರೆ.ಅಲ್ಲದೆ ಹನುಮಂತರಾಜು ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವ ಸಹ ರದ್ದಾಗಿದೆ.
"ಗೋಡ್ಸೆ ಮಹಾನ್ ದೇಶಭಕ್ತರಾಗಿದ್ದರು, ಭಾರತದಲ್ಲಿ ಹರಿಯುವ ಸಿಂಧೂನದಿಯಲ್ಲಿ ನನ್ನ ದೇಹದ ಚಿತಾಭಸ್ಮವನ್ನು ಬಿಡಬೇಕೆಂದು ಅವರು ಹೇಳಿದ್ದರು. ಘಾಗಾಗಿ ಅವರ ಚಿತಾಭಸ್ಮವನ್ನು ಸಹ ಇನ್ನೂ ಕಾಪಿಡಲಾಗಿದ್ದು ಸಿಂಧೂ ನದಿಯಲ್ಲಿ ಬಿಡಲಾಗಿಲ್ಲ" ಹೀಗೆ ಹನುಮಂತರಾಜು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದರು.
ಇನ್ನು ಈ ನಡುವೆ ಕೆಲವು ನಾಯಕರು ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ. "ನಿಮ್ಮ ಇಬ್ಬರು ಸಂಸದರು ತಮ್ಮ ವಿವಾದಾತ್ಮಕ ಹೇಳಿಕೆಗಳ ನಂತರವೂ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಗಳನ್ನು ಪಡೆಇದ್ದಾರೆ.ಆದರೆ ಹಿಂದುಳಿದ ಸಮುದಾಯದಿಂದ ಬಂದ ಯುವಕನನ್ನು ಮಾತ್ರ ಗುರಿಯಾಗಿಸಿಕೊಂಡು ಪಕ್ಷದಿಂದ ವಜಾಗೊಳಿಸುತ್ತಿರುವುದು ಎಷ್ಟು ಸರಿ. ನೀವು ನಿಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ ನಾವು ನಿಮಗೆ ತಕ್ಕ ಪಾಠ ಕಲಿಸುತ್ತೇವೆ" ಸ್ಥಳೀಯ ನಿವಾಸಿ ಲಿಂಗರಾಜು ಹೇಳಿದ್ದಾರೆ.
ಈ ವೇಳೆ ಪತ್ರಿಕೆ ಉಚ್ಚಾಟಿತ ನಾಯಕ ಹನುಮಂತರಾಜು ಅವರನ್ನು ಸಂಪರ್ಕಿಸಿದಾಗ "ನಾನೊಬ್ಬನೇ ಅವರ ಗುರಿಯಾಗಿದ್ದೆ. ನನ್ನ ಉಚ್ಚಾಟನೆಗೆ ಮುನ್ನ ಅವರು ನನಗೆ ನೋಟೀಸ್ ನೀಡಬೇಕಿತ್ತು. ರಾಜ್ಯದ ಎಲ್ಲಾ ಬಿಜೆಪಿ ಯುವ ಘಟಕದ ನಾಯಕರು ಇನ್ನೂ ನನ್ನೊಂದಿಗೆ ಇದ್ದಾರೆ, ಈ ಅಮಾನತು ಆದೇಶ ರದ್ದಾಗಲಿದೆ ಅಥವಾ ಹಿಂತೆಗೆದುಕೊಳ್ಲಲಾಗುತ್ತದೆ ಎಂದು ನಾನು ಭಾವಿಸಿದ್ದೇನೆ" ಎಂದರು.
SCROLL FOR NEXT