ರಾಜಕೀಯ

ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ: ರಾಜ್ಯ ನಾಯಕರ ವಿರುದ್ಧ ರಾಹುಲ್ ಗಾಂಧಿ ಗರಂ

Raghavendra Adiga
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಗರಂ ಆಗಿದ್ದಾರೆ.ಸಿದ್ದರಾಮಯ್ಯನವರ ಪರವಾಗಿ ಹಾಗೂ ಸಿಎಂ ವಿರುದ್ಧವಾಗಿ ಹೇಳಿಕೆಗಳನ್ನು ನೀಡುವ ಕಾಂಗ್ರೆಸ್ ನಾಯಕರಿಗೆ ರಾಹುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮತ್ತಿತರರು ಭಾನುವಾರ ದೆಹಲಿ ಸಭೆಗೆ ಹಾಆಜರಾಗಿದ್ದಾರೆ. ಈ ವೇಳೆ ರಾಹುಲ್ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸದೆ ಹೋದರೆ ತಕ್ಕ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
"ನಾವು ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ರಾಷ್ಟ್ರೀಯ ಮಾದರಿಯನ್ನಾಗಿ ಅನುಸರಿಸುತ್ತೇವೆ. ನೀವು ನಿಮ್ಮದೇ ಸರ್ಕಾರದ ವಿರುದ್ಧ ಹೇಳಿಕೆ, ಪ್ರತಿ ಹೇಳಿಕೆ ನೀಡಿದ್ದಾದರೆ ದೇಶದ ಉಳಿದ ಭಾಗಗಳಿಗೆ ಅದೆಂತಹಾ ಸಂದೇಶ ರವಾನೆ ಆಗಲಿದೆ? ನೀವು ನಿಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ, ಅದರ ಹೊರತಾಗಿ ಭಿನ್ನಾಭಿಪ್ರಾಯ ಹೇಳಿಕೆ ನಿಡುವುದಕ್ಕೆ ಅವಕಾಶವಿಲ್ಲ" ರಾಹುಲ್ ಹೇಳಿದ್ದಾರೆ.
ಜೆಡಿಎಸ್ ಮುಖಂಡ ಎಚ್.ಡಿ. ದೇವೇಗೌಡ ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳು ನೀಡುತ್ತಿದ್ದ ಸಿದ್ದರಾಮಯ್ಯ ಪರ ಹೇಳಿಕೆ ಸಂಬಂಧ ರಾಹುಲ್ ಅವರಿಗೆ ದೂರಿತ್ತಿದ್ದರು.ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇದರಿಂದ ಭಾರೀ ಮುಜುಗರವಾಗಲಿದೆ ಎಂದೂ ಅವರು ಹೇಳಿದ್ದರು.ಇದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್ ರಾಜ್ಯ ನಾಯಕರನ್ನು ಕರೆಸಿ ಮಾತನಾಡಿದ್ದಾರೆ.  ಏಕೆ ಸಿದ್ದರಾಮಯ್ಯ ಬಗ್ಗೆ ಅಂತಹ ಹೇಳಿಕೆಗಳನ್ನು ಈ ಸನ್ನಿವೇಶದಲ್ಲಿ ನೀಡುತ್ತಿದ್ದೀರಿ?ಕುಮಾರಸ್ವಾಮಿ ಮುಂದಿನ ಐದು ವರ್ಷಗಳವರೆಗೆ ಸಿಎಂ  ಎಂದು ನಾನು ಒಪ್ಪಿಕೊಂಡ ನಂತರ ಈಗ ಇಂತಹಾ ಹೇಳಿಕೆಗಳ ಅಗತ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಇನ್ನು ರಾಹುಲ್ ರಾಜ್ಯ ನಾಯಕರಿಗೆ ಹೀಗೆ ಹೇಳಿರುವುದು ಇದೇನೂ ಮೊದಲ್ನೇ ಬಾರಿಯಲ್ಲ. ಆದರೆ ಈ ಬಾರಿ ರಾಹುಲ್ ಗಾಂಧಿ ಪಕ್ಷದ ಮುಖಂಡರಿಗೆ ಅಂತಿಮ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 
ಯಶವಂತಪುರ ಶಾಸಕ  ಎಸ್ ಟಿ ಸೋಮಶೇಖರ್ ಅತೃಪ್ತ ಶಾಸಕರ ಸಭೆ ಕರೆಯುತ್ತಿದ್ದಾರೆ ಎನ್ನಲಾಗಿದೆ.ಈ ಕುರಿತಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರನ್ನು ಪ್ರಶ್ನಿಸಿದೆ.ಈ ಸಭೆಯ ಮಹತ್ವವೇನು? ಇದರ ಹಿಂದೆ ಯಾರಿದ್ದಾರೆ? ಇಂತಹಾ ದೂರುಗಳನ್ನಿಟ್ಟುಕೊಂಡು ಯಾರೊಬ್ಬರೂ ಮಾದ್ಯಮಗಳ ಮುಂದೆ ಹೋಗಬಾರದೆಂದು ರಾಹುಲ್ ಎಚ್ಚರಿಸಿದ್ದಾರೆ.
ವಿಶ್ವನಾಥ್ ತನ್ನ ಪಕ್ಷದ ಮುಖ್ಯಸ್ಥರೊಂದಿಗೆ ಮಾತನಾಡಬೇಕು: ದೇಶಪಾಂಡೆ
ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಒಕ್ಕೂಟ ನಾಯಕತ್ವದ ಬಗ್ಗೆ ಅತೃಪ್ತಿ ಹೊಂದಿದ್ದಲ್ಲಿ, ಅವರು ತಮ್ಮ ಪಕ್ಷದ ಅಧ್ಯಕ್ಷರಿಗೆ ದೂರು ನೀಡಬೇಕು ಎಂದು ಕಂದಾಯ ಮಂತ್ರಿ ಆರ್. ವಿ. ದೇಶಪಾಂಡೆ ಹೇಳಿದ್ದಾರೆ. "ಜೆಡಿಎಸ್ ಅಧ್ಯಕ್ಷರಾಗಿರುವ ಅವರು ಕಾಂಗ್ರೆಸ್ ನಾಯಕರ ಸಮಗ್ರತೆಯನ್ನು ಪ್ರಶ್ನಿಸುವ ಬದಲು ಜವಾಬ್ದಾರಿಯುತವಾಗಿ ಮಾತನಾಡಬೇಕುಅವರು ವಿವಾದಾಸ್ಪದ ಹೇಳಿಕೆಗಳನ್ನು ನೀಡದೆ ನೇರವಾಗಿ ಚರ್ಚೆಗೆ ಬರಬೇಕು" ದೇಶಪಾಂಡೆ ಹೇಳಿದರು.. 
SCROLL FOR NEXT