ರಾಜಕೀಯ

ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಮೊದಲ ವಿಕೆಟ್ ಪತನ: ಎಚ್.ಕೆ ಪಾಟೀಲ್ ರಾಜಿನಾಮೆ

Shilpa D
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್‌.ಕೆ ಪಾಟೀಲ್‌ ರಾಜೀನಾಮೆ ನೀಡಿದ್ದಾರೆ.. 
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಚ್.ಕೆ ಪಾಟೀಲ್, 'ಲೋಕಸಭಾ ಚುನಾವಣಾ ಫಲಿತಾಂಶ ತುಂಬಾ ಆಘಾತ ತಂದಿದೆ, ನೋವಾಗಿದೆ. ಅಂತಿಮವಾಗಿ ಜನರ‌ ತೀರ್ಪಿಗೆ ತಲೆಬಾಗಬೇಕು' ಎಂದು ಹೇಳಿಕೆ ನೀಡಿ ತಮ್ಮ ರಾಜಿನಾಮೆ ಪ್ರಕಟಿಸಿದ್ದಾರೆ.
 ಫಲಿತಾಂಶ ಸರ್ಕಾರವನ್ನು ಭದ್ರಗೊಳಿಸಲಿದೆಯೇ ಅಥವಾ ಅಭದ್ರಗೊಳಿಸಲಿದೆಯೇ ಎಂಬ ಪ್ರಶ್ನೆಗೆ ನಸು ನಗುತ್ತ ಕೆಲ ಕ್ಷಣ ಮೌನವಹಿಸಿದರು. ಬಳಿಕ ಈ ಫಲಿತಾಂಶ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದೆ. ಪರಿಣಾಮ ಬೀರಲೂ ಬಹುದು ಎಂದು ಅಭಿಪ್ರಾಯ ಪಟ್ಟರು. 
ಈ ಚುನಾವಣಾ ಫಲಿತಾಂಶ ಬಗ್ಗೆ ಪಕ್ಷದ ಹಿರಿಯ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದ ಸಲಹೆ ನೀಡಿದ ‌ಪಾಟೀಲ್‌, ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ್ದ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ‌ ಇದೆ ಎಂದು ಹೇಳಿದ್ದಾರೆ.
ಪಕ್ಷದ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೂ ಜನರ ಭಾವನೆಗಳನ್ನು ಗೌರವಿಸಬೇಕು. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಕಳಿಸಿರುವುದಾಗಿ ತಿಳಿಸಿದರು.
SCROLL FOR NEXT