ರಾಜಕೀಯ

ತುಮಕೂರಿನಲ್ಲಿ ಮುಗ್ಗರಿಸಿದ ದೊಡ್ಡಗೌಡರು; ಬೆಸೆಯದ ಮೈತ್ರಿಯಿಂದ ದುಬಾರಿ ಬೆಲೆ ತೆತ್ತ ದೇವೇಗೌಡರು!

Shilpa D
ತುಮಕೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ರಾಜಕೀಯವಾಗಿ ಮುಗ್ಗರಿಸಿದ್ದಾರೆ, ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸದಲ್ಲಿದ್ದ ಗೌಡರಿಗೆ ಫಲಿತಾಂಶ  ದೊಡ್ಡ ಆಘಾತವುಂಟು ಮಾಡಿದೆ.
ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ದೇವೆಗೌಡರು ಸೋತು ಬಿಜೆಪಿಯ ಜಿಎಸ್ ಬಸವರಾಜು ಗೆದ್ದು ಗೆಲುವಿನ ನಗೆ ಬೀರಿದ್ದಾರೆ,  ಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಸೋತಿದ್ದಾರೆ. 
ತುಮಕೂರಿನಿಂದ ದೇವೇಗೌಡರು ಕಣಕ್ಕಿಳಿಯಲು ತೀವ್ರ ವಿರೋಧಗಳು ವ್ಯಕ್ತ ವಾಗಿದ್ದವು. ಕ್ರೀಯಾಶೀಲ ಸಂಸದ ಎಂದೇ ಖ್ಯಾತರಾಗಿದ್ದ ಮುದ್ದ ಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ, ಆದರೆ ಅವರು ತುಮಕೂರನ್ನು ಆಯ್ಕೆ ಮಾಡಿಕೊಂಡರು.ಸ್ಥಳೀಯ ನಾಯಕರ ವಿರೋಧ ಹಾಗೂ ಬೆಸೆಯದ ಮೈತ್ರಿಯಿಂದ ದೇವೇಗೌಡರು ಭಾರೀ ಬೆಲೆ ತೆರಬೇಕಾಯಿತು. 
ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ತುಮಕೂರಿನಲ್ಲಿ ಮತ್ತು ಮಂಡ್ಯದಲ್ಲಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸಿದ್ದಾರೆ, ನಾವು ಪರಮೇಶ್ವರ್ ಮತ್ತು ದೇವೇಗೌಡ ವಿರುದ್ಧ ಮತ ಹಾಕಿದ್ದೇವೆ ಎಂದು ತುಮಕೂರಿನಲ್ಲಿ ಕಾಂಗ್ರೆಸ್ ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ. 
ಗೊಲ್ಲ , ಹಾಗೂ ಕುರುಬ ಸಮುದಾಯ ಗೌಡರ ವಿರುದ್ಧ ಮತ ಚಲಾಯಿಸಿವೆ, ಗೌಡರ ಕುಟುಂಬ ರಾಜಕಾರಣ ವಿರೋಧಿಸಿ ಜನ ನನಗೆ ಮತ ಹಾಕಿದ್ದಾರೆ ಎಂದು ಬಿಜೆಪಿಯ ಜಿಎಸ್ ಬಸವರಾಜು ಹೇಳಿದ್ದಾರೆ. 
SCROLL FOR NEXT