ರಾಜಕೀಯ

ಚಾಮರಾಜನಗರ: ಪ್ರಸಾದ್ ಗೆಲುವಿನಲ್ಲಿ ವೀರಪ್ಪನ್ ಮಾಜಿ ಸಹಚರರ ಕುಟುಂಬ ನಿರ್ಣಾಯಕ ಪಾತ್ರ

Nagaraja AB

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವ ನಾರಾಯಣ್ ವಿರುದ್ಧ ಕೇವಲ 1.816 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್  ರೋಚಕ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಚಾಮರಾಜನ ನಗರ ಕ್ಷೇತ್ರದ ದಲಿತ ನಾಯಕನ ಗೆಲುವಿನಲ್ಲಿ ಸಣ್ಣದೊಂದು ಸಮುದಾಯದ ನಿರ್ಣಾಯಕ ಪಾತ್ರ ವಹಿಸಿದೆ.ಕೆಲವು ದಶಕಗಳ ಹಿಂದೆ ಈ ಪ್ರದೇಶದಲ್ಲಿ ಭಯ ಭೀತಿ ಹುಟ್ಟಿಸುತ್ತಿದ್ದ ದಂತ ಚೋರ ವೀರಪ್ಪನ್ ಮಾಜಿ ಸಹಚರರು ಹಿನ್ನೆಡೆಯಲ್ಲಿದ್ದ ಶ್ರೀನಿವಾಸ್ ಪ್ರಸಾದ್ ಕೈ ಹಿಡಿದಿದ್ದಾರೆ.

ವೀರಪ್ಪನ್ ನ ಸುಮಾರು 100 ಮಾಜಿ ಸಹಚರರು ಹಾಗೂ ಅವರ ಕುಟುಂಬದವರು ಈ ಬಾರಿ ಪ್ರಸಾದ್ ಅವರಿಗೆ ಮತ ಚಲಾಯಿಸಿದ್ದು, ಪ್ರಸಾದ್ ಅವರಿಗೆ ಧನ್ಯವಾದ ಆರ್ಪಿಸಿದ್ದಾರೆ.ಅಷ್ಟಕ್ಕೂ ಪ್ರಸಾದ್ ಗೆ ಮತ ಹಾಕಲು ಕಾರಣವೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

1999ರಲ್ಲಿ ಶ್ರೀನಿವಾಸ್ ಪ್ರಸಾದ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ 12 ಮಹಿಳೆಯರು ಸೇರಿದಂತೆ ಸುಮಾರು 140 ಜನರ ಮೇಲೆ  ರಾಜ್ ಕುಮಾರ್ ಪ್ರತಿಮೆ ಅಪಹರಣ, ಪೊಲೀಸರ ಕೊಲೆ ಮತ್ತಿತರ ಆರೋಪದಡಿಯಲ್ಲಿ ಟಾಡಾ ಕೇಸ್ ದಾಖಲಿಸಿ, ಹೈಕೋರ್ಟ್ ನಿಂದ ಸ್ಥಾಪಿಸಲಾಗಿದ್ದ ಟಾಡಾ ನ್ಯಾಯಾಲಯಕ್ಕೆ ಪ್ರತಿನಿತ್ಯ ಅಲೆಯುವಂತೆ ಮಾಡಲಾಗಿತ್ತು.
SCROLL FOR NEXT