ರಾಜಕೀಯ

ತುಮಕೂರು: ಪರಮೇಶ್ವರ ಹಠಾವೋ, ಕಾಂಗ್ರೆಸ್ ಬಚಾವೊ , ಹಲವು ಕಡೆಗಳಲ್ಲಿ ಭಿತ್ತಿಪತ್ರ

Nagaraja AB

ತುಮಕೂರು: ಮಾಜಿ ಪ್ರಧಾನಿ ಎಚ್ . ಡಿ. ದೇವೇಗೌಡರನ್ನು ತುಮಕೂರಿನಿಂದ ಚುನಾವಣೆಗೆ ನಿಲ್ಲಿಸಿದ್ದಕ್ಕೆ ಕಾಂಗ್ರೆಸ್ ಪಕ್ಷದ ಹಲವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಇನ್ನೂ ಮಡಗಟ್ಟಿದೆ. ನಗರದ ಹಲವು ಕಡೆಗಳಲ್ಲಿ ಪರಮೇಶ್ವರ ಹಠಾವೋ, ಕಾಂಗ್ರೆಸ್ ಬಚಾವೋ ಎಂಬ ಭಿತ್ತಿಗಳನ್ನು ಅಂಟಿಸಲಾಗಿತ್ತು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಭಾವಚಿತ್ರ ಭಿತ್ತಿಪತ್ರಗಳಲ್ಲಿ ಇದೆ. ಭಿತ್ತಿಪತ್ರದ ಕೆಳಗೆ ಇಂತಿ ನೊಂದ ಕಾರ್ಯಕರ್ತರು , ತುಮಕೂರು ಜಿಲ್ಲೆ ಎಂದಿದೆ.

ಬಿಜಿಎಸ್ ವೃತ್ತದ ಬಳಿಯ ಗ್ರಂಥಾಲಯದ ಗೋಡೆ, ಸ್ಕೈವಾಕ್ , ವಾಲ್ಮೀಕಿನಗರದಲ್ಲಿ ಭಿತ್ತಿಪತ್ರಗಳು ಹೆಚ್ಚು ಕಂಡುಬಂದಿವೆ. ತೆರವುಗೊಳಿಸುವಂತೆ  ಪರಮೇಶ್ವರ ಬೆಂಬಲಿಗರು ಮಾಡಿದ ಮನವಿ ನಂತರ ಅವುಗಳನ್ನು ತೆರವುಗೊಳಿಸಲಾಗಿದೆ.
ಕಾಂಗ್ರೆಸ್ ಬಂಡಾಯ ನಾಯಕರಾದ ಮಧುಗಿರಿಯ ಮಾಜಿ ಶಾಸಕ ಕೆಎನ್ ರಾಜಣ್ಣ ಹಾಗೂ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಮತ್ತಿತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಬೇಕಿತ್ತು.ದೇವೇಗೌಡರ ಬದಲಿಗೆ ಮುದ್ದ ಹನುಮೇಗೌಡರಿಗೆ ಟಿಕೆಟ್ ನೀಡಬೇಕಾಗಿತ್ತು ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
SCROLL FOR NEXT