ರಾಜಕೀಯ

ತುಮಕೂರಿನಲ್ಲಿ ಡಿಸಿಎಂಗೆ ಭಾರೀ ಮುಜುಗರ: 'ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ' ಪೋಸ್ಟರ್ ಹಾಕಿ ಆಕ್ರೋಶ

Raghavendra Adiga
ತುಮಕೂರು: "ಪರಮೇಶ್ವರ ಹಠಾವೋ, ಕಾಂಗ್ರೆಸ್ ಬಚಾವೋ" ಹೀಗೊಂದು ಪೋಸ್ಟರ್ ಗಳು ತುಮಕೂರು ನಗರ, ಜಿಲ್ಲೆಯಾದ್ಯಂತ ಶನಿವಾರ ರಾರಾಜಿಸಿದೆ. ಕಾಂಗ್ರೆಸ್ ಧುರೀಣ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರನ್ನು ಕಾಂಗ್ರೆಸ್ ನಿಂಡ ತೊಲಗಿಸಿ, ಇಲ್ಲವೇ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂದು ಅರ್ಥೈಸುವ ಪೋಸ್ಟರ್ ಗಳನ್ನು ಹಾಕಿ ಪರಮೇಶ್ವರ್ ವಿರುದ್ಧ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ  ತುಮಕೂರಿನಲ್ಲಿ ನಡೆದಿದೆ.
ಪರಮೇಶ್ವರ ಅವರ ಭಿನ್ನಾಭಿಪ್ರಾಯದಿಂದಾಗಿಯೇ ತುಮಕುರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಚುನಾವಣೆಯ ಸೊಲು ಎದುರಾಗಿದೆ ಎಂದು ಮಾತುಗಳು ಕೇಳಿಬಂದಿದೆ.
ತುಮಕೂರಿನ ವಾಲ್ಮೀಕಿ ನಗರದ ಪ್ರವೇಶದ್ವಾರ ಬಳಿ ಈ ಪೋಸ್ಟರ್ ಗಳು ಕಂಡು ಬಂದಿದ್ದು ಪರಮೇಶ್ವರ ಬೆಂಬಲಿಗರು ತಕ್ಷಣ ಪೋಸ್ಟರ್ ಗಳನ್ನು ತೆಗೆಸುವಂತೆ ಪೋಲೀಸರಿಗೆ ಸೂಚಿಸಿದ್ದರು.
ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ, ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಬಂಡಾಯ ಕಾಂಗ್ರೆಸ್ ನಾಯಕರು ಅಭ್ಯರ್ಥಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ತುಮಕೂರಿನಲ್ಲಿ ದೇವೇಗೌಡರನ್ನು ಕಣಕ್ಕಿಳಿಸುವ ಬದಲಿಗೆ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಬೇಕಾಗಿತ್ತೆಂದು ಅವರು ಭಾವಿಸಿದ್ದರು.
ಇನ್ನು ಬಿಜೆಪಿ ಸಂಸದ ಚುನಾಯಿತ ಜಿ.ಎಸ್. ಬಸವರಾಜು ಸಹ ಮುದ್ದಹನುಮೇಗೌಡರೇನಾದರೂ ತಮ್ಮ ಎದುರಾಳಿಯಾಗಿದ್ದರೆ ತಾವು ಇನ್ನಷ್ಟು ಕಠಿಣ ಹೋರಾಟ ಎದುರಿಸಬೇಕಾಗಿತ್ತು ಎಂದಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿ (ಎಸ್) ಮುಖಂಡರು ಚುನಾವಣಾ ಸೋಲಿನ ಜವಾಬ್ದಾರಿಯನ್ನು ಹೊರಲಿದ್ದಾರೆಂದು ಪರಮೇಶ್ವರ್ ಮಾದ್ಯಮದವರಿಗೆ ಹೇಳಿದ್ದಾರೆ.
ಈ ಲೋಕಸಭೆ ಚುನಾವಣೆಯಲ್ಲಿ  ತುಮಕೂರಿನಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ  ಜಿ.ಎಸ್.ಬಸವರಾಜು 5,96,231 ಮತಗಳನ್ನು ಪಡೆದಿದ್ದರೆ, ದೇವೇಗೌಡರು 5,83,344 ಮತಗಳನ್ನು ಗಳಿಸಿದ್ದಾರೆ. ಬಸವರಾಜು ಅವರು 12,887 ಬಹುಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದರು.
SCROLL FOR NEXT