ರಾಜಕೀಯ

ಇದು ನನ್ನ ಗೆಲುವಲ್ಲ, ಸ್ವಾಭಿಮಾನದ ಗೆಲುವು, ಮಂಡ್ಯ ಜನತೆಯ ಗೆಲುವು: ಸುಮಲತಾ

Lingaraj Badiger
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಭರ್ಜರಿ ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಬುಧವಾರ ತಮ್ಮ ಗೆಲುವನ್ನು ಮಂಡ್ಯ ಜನತೆಗೆ ಅರ್ಪಿಸಿದ್ದಾರೆ.
ಇಂದು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್​​ನಲ್ಲಿನಡೆದ ಅಂಬರೀಷ್ ಜನ್ಮದಿನೋತ್ಸವ ಹಾಗೂ ಸ್ವಾಮಿಮಾನಿ ವಿಜಯೋತ್ಸವದಲ್ಲಿ ಮಾತನಾಡಿದ ಸುಮಲತಾ ಅಬಂರೀಷ್, ಇಂದು ನನ್ನ ಗೆಲುವಲ್ಲ. ಸ್ವಾಭಿಮಾನದ ಗೆಲುವು. ಮಂಡ್ಯ ಜನತೆಯ ಗೆಲುವು. ಅಂಬಿ ಅಭಿಮಾನಿಗಳ ಗೆಲುವು ಎಂದರು.
ಈ ಗೆಲುವು ನನ್ನದಲ್ಲ, ನಿಮ್ಮದು. ನನ್ನ ಪರ ಕೆಲಸ ಮಾಡಿರುವ ಪ್ರತಿಯೊಬ್ಬಕಾರ್ಯಕರ್ತರ ಗೆಲುವು. ನನಗೆ ಆರತಿ ಎತ್ತಿ ಬರ ಮಾಡಿಕೊಂಡರಲ್ಲ ಆ ಮಹಿಳೆಯರು ಗೆಲುವು. ಕಾಂಗ್ರೆಸ್ ಕಾರ್ಯಕರ್ತರು ಗೆಲುವು, ರೈತರ ಸಂಘದ ಗೆಲುವು ಎಂದು ಸುಮಲತಾ ಹೇಳಿದರು.
ಇನ್ನು ರಾಜ್ಯದಲ್ಲಿ 27 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ ಮಂಡ್ಯ ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡಿದ ಬಿಜೆಪಿಯ ಗೆಲುವು, ಅಷ್ಟೇ ಅಲ್ಲದೇ ಇದು ಸರ್ವಪಕ್ಷದ ಗೆಲುವು, ಎಲ್ಲ ನಿಮಗೆ ಸೇರುತ್ತೇ ಎಂದರು.
ಇಲ್ಲಿ ಹಣ ಅಲ್ಲ, ಸ್ವಾಭಿಮಾನ ಮುಖ್ಯ ಎಂಬುದನ್ನು ತೋರಿಸಿದ್ದಿರಿ. ಇವತ್ತು ಮಂಡ್ಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಕಳೆದ 52 ವರ್ಷಗಳ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಿಸಿ ನೀವು ಇತಿಹಾಸ ಸೃಷ್ಠಿ ಮಾಡಿದ್ದಿರಿ. ದೇಶಾದ್ಯಂತ ಸ್ವತಂತ್ರ ಅಭ್ಯರ್ಥಿಗಳಾಗಿ ಒಟ್ಟು 222 ಮಂದಿ ಸ್ಪರ್ಧೆ ಮಾಡಿದ್ದಾರೆ. ಆದರೆ, ಗೆದ್ದಿದ್ದು ಮಾತ್ರ ಒಬ್ಬರೇ ಇದರಲ್ಲಿ ಕೂಡ ಮಂಡ್ಯ ಇತಿಹಾಸ ಬರೆಯಿತ್ತು. ಒಬ್ಬ ಸ್ವತಂತ್ರ ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸಿದ ನೀವು ಮಂಡ್ಯದ ಮಹಿಳೆಯ ಘನತೆಯನ್ನು ಇಡೀ ಪ್ರಪಂಚಕ್ಕೆ ಎತ್ತಿತೋರಿಸಿದ್ದೀರಿ ಎಂದರು.
SCROLL FOR NEXT