ರಾಜಕೀಯ

ಉಪ ಚುನಾವಣೆಯಲ್ಲಿ ತಟಸ್ಥವಾಗಿರುವ ಧೋರಣೆ: ಸುಮಲತಾ

Srinivasamurthy VN

ಮಂಡ್ಯ: ಉಪ ಚುನಾವಣೆಯಲ್ಲಿ ಬೆಂಬಲ ನೀಡಿ ಎಂದು ನನ್ನನ್ನು ಇನ್ನೂ ಯಾರು ಭೇಟಿ ಮಾಡಿ ಬೆಂಬಲ ಕೇಳಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಇನ್ನು ಸಮಯ ಇದೆ. ಸುಪ್ರೀಂ ಕೋರ್ಟ್ ನಿಂದ ತೀರ್ಪು ಬರಬೇಕಿದೆ. ಯಾರು ಸೂಕ್ತ ಎಂಬುದನ್ನು ಜನ ಹೇಳಬೇಕು. ನಾನು ತೀರ್ಮಾನ ತೆಗೆದುಕೊಳ್ಳುವುದಲ್ಲ ಎಂದು ಹೇಳುವ ಮೂಲಕ ಜಾಣ ಉತ್ತರವನ್ನು ಸುಮಲತಾ ನೀಡಿದ್ದಾರೆ.

ಟಿವಿಯಲ್ಲಿ ಕಾಣಿಸಿಕೊಂಡು ತೋರಿಕೆಯ ಕೆಲಸ ಮಾಡುತ್ತಿಲ್ಲ
ಇದೇ ವೇಳೆ ಎಲ್ಲಿದ್ದೀಯಮ್ಮ ಸುಮಲತಾ ಅವರನ್ನು ಟೀಕೆ ಮಾಡಿದ್ದ ನಾಯಕರಿಗೆ ತಿರುಗೇಟು ನೀಡಿರುವ ಸುಮಲತಾ ಅವರು, 'ನಾನು ಮಂಡ್ಯದಲ್ಲೇ ಇದ್ದೇನೆ.  ಮಂಡ್ಯ ಜನಪರ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

'ನಾನು ಖಂಡಿತಾ ರೈತರ ಪರವಾಗಿ ಇದ್ದೇನೆ. ಎಲ್ಲಿದ್ದೀಯಪ್ಪ ಎನ್ನುವುದನ್ನು ಕ್ಯಾಚಿಂಗ್ ಮಾಡಲಾಗ್ತಿದೆ. ಎಲೆಕ್ಷನ್ ಟೈಂನಿಂದಲೂ ಕ್ಯಾಚಿಂಗ್ ಮಾಡಲಾಗ್ತಿದೆ. ಅದು ಯಾರಿಗೆ ಅನ್ವಯ ಆಗಬೇಕೋ ಅವರಿಗೆ ಮಾತ್ರ. ನಾನು ರೈತ ಮಹಿಳೆಯರೊಂದಿಗೆ ಇರುತ್ತೇನೆ. ಟಿವಿಯಲ್ಲಿ ಕಾಣಿಸಿ ತೋರಿಕೆಯ ಕೆಲಸ ಮಾಡಲ್ಲ. ಫೋಟೋಗೆ ನಿಂತುಕೊಂಡು ನಾಟಕ ಮಾಡಲ್ಲ ಎಂದು ತಿರುಗೇಟು ನೀಡಿದರು.

'ಜನರ ಮಧ್ಯೆ ಹೋಗೋದು, ಟಿವಿಯಲ್ಲಿ ಕಾಣಿಸಿಕೊಂಡು ನಿಮ್ಮ ಜೊತೆ ಇದ್ದೇನೆ ಅಂತಾ ಹೇಳಿಕೊಂಡರೆ ಅದು ತೋರಿಸಿಕೊಳ್ಳುವ ಕೆಲಸ ಆಗುತ್ತದೆ. ಹಿಂದೆಯಿಂದ ಕೆಲಸ ಮಾಡುವುದು ಒಂದು ಉತ್ತಮವಾದ ಕೆಲಸ ಆಗುತ್ತದೆ. ಫೋಟೋ ತೆಗೆಸಿಕೊಂಡು ನಾನು ನಿಮ್ಮ ಜೊತೆ ಇದ್ದೇನೆ ಅಂತಾ ಹೇಳಲ್ಲ. ನಾನು ಕೆಲಸ ಮಾಡುವ ಮೂಲಕ ನಿಮ್ಮ ಜೊತೆ ನಾನು ಇದ್ದೇನೆ. ನಮ್ಮ ರಸ್ತೆ ಏನಿದೆ? ನೀರು ಹೇಗಿದೆ? ಎನ್ನುವುದರ ಬಗ್ಗೆ ಚರ್ಚೆ ಮಾಡಬೇಕು. ಇದನ್ನು ಬಿಟ್ಟು ನಾನು ಫೋಟೋಗೆ ನಿಂತುಕೊಂಡು ನಾಟಕ ಮಾಡಲು ಬಂದಿಲ್ಲ. 40 ವರ್ಷದಲ್ಲಿ ನಾನು ಸಿನಿಮಾದಲ್ಲಿ ಸಾಕಷ್ಟು ಅಭಿನಯ ಮಾಡಿದ್ದೇನೆ. ರಾಜಕೀಯದಲ್ಲಿ ನಾನು ನಾಟಕವಾಡಲು ಬಂದಿಲ್ಲ ಎಂದು ಸುಮಲತಾ ಕಿಡಿಕಾರಿದರು.

SCROLL FOR NEXT