ರಾಜಕೀಯ

ಅನರ್ಹ ಕಾಂಗ್ರೆಸ್ ಶಾಸಕರಿಗೆ ಉಪ ಚುನಾವಣೆ ಹಗ್ಗದ ಮೇಲಿನ ನಡಿಗೆ!

Shilpa D

ಬೆಳಗಾವಿ: ಉಪ  ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ಅನರ್ಹ ಶಾಸಕರಿಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದಾಗ ಇವರಿಗೆ ಅಪಾರ ಬೆಂಬಲ ದೊರಕಿತ್ತು.

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಹಾಗೂ ಶ್ರೀಮಂತ್ ಪಾಟೀಲ್ ಅವರಿಗೆ ಕಾಂಗ್ರೆಸ್ ನಾಯಕರ ಬೆಂಬಲವಿತ್ತು, ದಶಕಗಳ ಕಾಲ ಇವರ ಬೆನ್ನಿಗೆ ನಿಂತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಈ ಶಾಸಕರು ತಮ್ಮ ಕ್ಷೇತ್ರಗಳಿಂದ ದೂರವಿರುವ ಕಾರಣ  ಗೆಲುವಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಉಪ ಚುನಾವಣೆಗೆ ಇನ್ನು ಕೇವಲು ಮೂರು ವಾರ ಮಾತ್ರ ಬಾಕಿಯಿದೆ,. ಹೀಗಾಗಿ ಕಾಂಗ್ರೆಸ್ ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ, ಗೋಕಾಕ್, ಅಥಣಿ , ಕಾಗವಾಡ ದಲ್ಲಿ ಸಿದ್ಧತೆ ನಡೆಸಿದ್ದಾರೆ.  ಸಮ್ಮಿಶ್ರ ಸರ್ಕಾರ ಬಿಳಲು ಕಾರಣವಾದ ರಮೇಶ್ ಜಾರಕಿಹೊಳಿ ಸೋಲಿಸಲು ಎಲ್ಲಾ ರೀತಿಯ ತಯಾರಿ ಮಾಡಲಾಗುತ್ತಿದೆ.

ಗೋಕಾಕ್ ನಲ್ಲಿ ರಮೇಶ್ ವಿರುದ್ದ ಅವರ ಸೋದರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ, ರಮೇಶ್ 5 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ, ಚುನಾವಣೆ ಗೆಲ್ಲಲು ಯಾವ ರೀತಿ ಟ್ರಿಕ್ಸ್ ಬಳಸಬೇಕು ಎಂಬುದು ಗೊತ್ತಿದೆ  ಎಂದು ಲಖನ್ ಜಾರಕಿ ಹೊಳಿ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಗೆಲ್ಲುವುದಾಗಿ ಹೇಳಿರುವ  ರಮೇಶ, ತಾನು ಗೆದ್ದು ಡಿಸಿಎಂ ಆಗುವ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, ಆದರೆ ಸೋತರೆ  ರಾಜಕೀಯ ಜೀವನವೇ ಅಂತ್ಯವಾಗುತ್ತದೆ.

ಅಥಣಿಯಲ್ಲಿ ಮಹೇಶ್ ಕುಮಟಳ್ಳಿಗೆ ಪರ್ಯಾಯ ನಾಯಕನಿಗಾಗಿ ಕಾಂಗ್ರೆಸ್ ಹುಟುಕಾಡ ನಡೆಯುತ್ತಿದೆ. ಎಬಿ ಪಾಟೀಲ್ ಸೇರಿ 19 ಹಿರಿಯ ನಾಯಕರು ರೇಸ್ ನಲ್ಲಿದ್ದಾರೆ.

ಮುಂಬರುವ ಉಪ ಚುನಾವಣೆಯಲ್ಲಿ ಯಾವುದೇ ರೀತಿಯ ಮ್ಯಾಚ್ ಫಿಕ್ಸಿಂಗ್ ಇಲ್ಲ ಎಂದು  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಲಖನ್ ತಿಳಿಸಿದ್ದಾರೆ.

SCROLL FOR NEXT