ರಾಜಕೀಯ

ಬಿಜೆಪಿಗೆ ಕಾಂಗ್ರೆಸ್ ಮಾತ್ರವೇ ಪ್ರತಿಸ್ಪರ್ಧಿ: ಆಂತರಿಕ ಸಮನ್ವಯ ಸಾಧಿಸಲು ಗೇಮ್ ಪ್ಲಾನ್

Shilpa D

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ  ನಡೆಸುತ್ತಿದೆ, ಇದೇ ವೇಳೆ ಹೊರಗಿನಿಂದ ಬಂದ ಅಭ್ಯರ್ಥಿಗಳಿಗೆ  ಸ್ಥಳೀಯ ನಾಯಕರ ಬೆಂಬಲ ಹಾಗೂ ಸಹಕಾರ ಒದಗಿಸುವುದು ಆಡಳಿತಾರೂಢ ಬಿಜೆಪಿಗೆ ಸತ್ವ ಪರೀಕ್ಷೆಯೇ ಆಗಿದೆ.

ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಸ್ಥಿರವಾಗಿರಬೇಕಾದರೇ ಸುಮಾರು 8 ಕ್ಷೇತ್ರಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆಯಿದೆ,  ಹೀಗಾಗಿ ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಸಮನ್ವಯ ಅಗತ್ಯವಾಗಿದೆ,

ಕಳೆದ ಕೆಲವು ದಿನಗಳಿಂದ ನಡೆದ ಹಲವು ಸಭೆಗಳಲ್ಲಿ ರಾಜ್ಯ, ಜಿಲ್ಲೆ,  ಹಾಗೂ ವಿಧಾನಸತ್ರೆ ಕ್ಷೇತ್ರದ ನಾಯಕರುಗಳ ಜೊತೆ ಚರ್ಚಿಸಲಾಗಿದೆ. ಅಭ್ಯರ್ಥಿಗಳು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ, ಜೊತೆಗೆ ಅವರಿಗೆ ಭರವಸೆ ಬರುವ ರೀತಿಯಲ್ಲಿ ವರ್ತಿಸುವಂತೆ ಹೇಳಲಾಗಿದೆ.

ಅನರ್ಹ ಶಾಸಕರು ಬಿಜೆಪಿ ಟಿಕೆಟ್ ನಿಂದ ವಿಧಾನಸಭೆ ಮರು ಚುನಾವಣೆಗೆ ಸ್ಪರ್ಧಿಸಿದ್ದಾರೆ, ಬಿಜೆಪಿ ಕಾರ್ಯಕರ್ತರ ಅನಪೇಕ್ಷಿತ ಬೆಂಬಲವನ್ನು ಪಡೆಯುವುದು ಇವರಿಗೆ ಬಹುದೊಡ್ಡ ಸವಾಲಾಗಿದೆ.ಇದರ ಜೊತೆಗೆ ಕೆಲ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಮಟ್ಟಿದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತವರೂರಾದ ಅಥಣಿ, ವಿಜಯನಗರ ಕ್ಷೇತ್ರಗಳಲ್ಲಿ ವಲಸಿಗರು ಹಾಗೂ ಮೂಲ ಬಿಜೆಪಿಗರ ನಡುವೆ ಶೀತಲ ಸಮರ ಆರಂಭವಾಗಿದೆ, ಪಕ್ಷದಲ್ಲಿರುವ ಎಲ್ಲರ ಬೆಂಬಲ ಪಡೆದು ಸಮನ್ವಯ ಸಾಧಿಸುವುದು ಕೂಡ ಪ್ರಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.

ಬಿಜೆಪಿ ಕಾಂಗ್ರೆಸ್ ಅನ್ನು ಟಾರ್ಗೆಟ್ ಮಾಡಿದೆ, ಜೆಡಿಎಸ್ ಬಿಜೆಪಿಗೆ ಸವಾಲೇ ಅಲ್ಲ ಎಂಬಂತೆ ಪರಿಗಣಿಸಿದೆ, ಜೆಡಿಎಸ್ ನಾಯಕರು ಕೂಡ ಬಿಜೆಪಿ ಸರ್ಕಾರ ಪತನಗೊಳ್ಳಬಾರದು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

SCROLL FOR NEXT