ರಾಜಕೀಯ

'ಬೆಂಗಳೂರು' ಗೆಲ್ಲಲ್ಲು ದಳಪತಿಗಳ ಹಣಾಹಣಿ!

Shilpa D

ಬೆಂಗಳೂರು: ಇತ್ತೀಚೆಗೆ ನಡೆದಲ ಹಲವು ರಾಜಕೀಯ ಬೆಳವಣಿಗೆಳಲ್ಲಿ ಜೆಡಿಎಸ್ ಶಾಸಕರು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಜಂಪ್ ಮಾಡಿದ್ದಾರೆ, ಹೀಗಾಗಿ ಮತ್ತೆ ಬೆಂಗಳನ್ನು ತನ್ನ ಹಿಡಿತಕ್ಕೆ ತೆಗೆದುತೊಳ್ಳಲು ಜೆಡಿಎಸ್ ಹವಣಿಸುತ್ತಿದೆ.

2013 ರಲ್ಲಿ ಬೆಂಗಳೂರು ನಗರದಲ್ಲಿ ಮೂವರು ಜೆಡಿಎಸ್ ಶಾಸಕರಿದ್ದರು, ಮಹಾಲಕ್ಷ್ಮಿ ಲೇಔಟ್, ಚಾಮರಾಜಪೇಟೆ ಹಾಗೂ ಪುಲಕೇಶಿ ನಗರ, ಮತ್ತು 15 ಬಿಬಿಎಂಪಿ ಕೌನ್ಸಿನಲರ್ ಗಳಿದ್ದರು. ಆದರೆ ಅದಾದ ನಂತರ ಅಂದರೆ 2018ರಲ್ಲಿ ಇಬ್ಬರು ಶಾಸಕರು ಮತ್ತು 14 ಕೌನ್ಸಿಲರ್ ಗಳಿದ್ದರು. 2018ರ ವಿಧಾನಸಭೆ ಚುನಾವಣೆಗೂ ಮುನ್ನ  ಬೆಂಗಳೂರು ಶಾಸಕರಾದ ಜಮೀರ್ ಆಹ್ಮದ್ ಮತ್ತು ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್  ಕಾಂಗ್ರೆಸ್ ಸೇರ್ಪಡೆಯಾದರು,. ಜೆಡಿಎಸ್ ದಾಸರಹಳ್ಳಿ ಮತ್ತು ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೆಲುವು ಸಾಧಿಸಿತ್ತು.

ಆದರೆ ಇತ್ತಿಚೆಗೆ ಗೋಪಾಲಯ್ಯ  ಕೂಡ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ 1ಕ್ಕೆ ಇಳಿದಿದೆ.11 ಕೌನ್ಸಿಲರ್ ಗಳು, ಒಬ್ಬರು ರಾಜ್ಯಸಭಾ ಸದಸ್ಯ ಹಾಗೂ ಇಬ್ಬರು ಎಂಎಲ್ ಸಿಗಳಿದ್ದಾರೆ.

ಸದ್ಯ ಜೆಡಿಎಸ್ ಮುಖಂಡರು ಬೆಂಗಳೂರಿನ ಮೂರು ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಮೂರು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲುವ ಸಾಧ್ಯತೆಯಿದೆ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಅಬಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ, ಮಹಾಲಕ್ಷ್ಮಿ ಲೇಔಟ್ ಮತ್ತು ಯಶವಂತಪುರಗಳಲ್ಲಿ ಪ್ರಚಾರ ನಡೆಸಿದರು ಇಂದಿನಿಂದ ದೇವೇಗೌಡರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಮಾಡಿಕೊಂಡಿದ್ದವು,  ಈ ವೇಳೆ ಬೆಂಗಳೂರು ಉತ್ತರ ಲೋಕಸಕಭಾ ಕ್ಷೇತ್ರಕ್ಕೆ  ಸೂತ್ತ ಅಭ್ಯರ್ಥಿ ಸಿಗಲಿಲ್ಲ.

ಜಾತ್ಯಾತೀತ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್ ಗೆ ಯಾವುದೇ ಸಿದ್ಧಾಂತವಿಲ್ಲ,  ಒಮ್ಮೆ ಬಿಜೆಪಿ ಜೊತೆ ಹೋಗಿ ಮೈತ್ರಿ ಮುರಿದುಕೊಂಡಿದೆ, 2018ರಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಿ ನಂತರ ಪತನಗೊಂಡಿತ್ತು.  ಸದ್ಯ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಇದು ಕೂಡ ಮುಂದುವರಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಪಕ್ಷದಿಂದ ಗೆದ್ದ ಶಾಸಕ, ಸಂಸದರಿಗೆ ಬೆಲೆಯಿಲ್ಲ, ಕೇವಲ ಕುಟುಂಬ ಕೇಂದ್ರಿತ ರಾಜಕಾರಣವಾಗಿದೆ ಎಂದು ರಾಜಕೀಯ ತಜ್ಞ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.

SCROLL FOR NEXT