ರಾಜಕೀಯ

ಗೋಕಾಕ್ ಉಪಚುನಾವಣೆ: ಕುಟುಂಬ ರಾಜಕೀಯ ಮತ್ತು ಜಾತಿಯದ್ದೇ 'ಕಾರುಬಾರು'

Shilpa D

ಬೆಂಗಳೂರು:  1967ರಲ್ಲಿ ಮೊಟ್ಟ ಮೊದಲ ಬಾರಿಗೆ ಗೋಕಾಕ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬಿಜೆಪಿ ಜೊತೆ ತೀವ್ರತರನಾದ ಹೋರಾಟಕ್ಕೆ ನಿಂತಿದೆ.

1999ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಟಿಕೆಟ್ ನಲ್ಲಿ ರಮೇಶ್ ಜಾರಕಿಹೊಳಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ,  ಸದ್ಯ ಬಿಜೆಪಿ ಅಬ್ಯರ್ಥಿಯಾಗಿ ರಮೇಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ, ಅವರ ವಿರುದ್ಧವಾಗಿ ಅವರ ಸಹೋದರ ಲಖನ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಹಾಗೂ ಅಶೋಕ್ ಪೂಜಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದಾರೆ.

ಇಲ್ಲಿಯವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಸಮೀಪಕ್ಕೆ ಬಂದು ಸೋತಿತ್ತು. ಹೀಗಾಗಿ ಹತಾಶೆಗೊಂಡಿದ್ದ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆಯಲು  ನಿಂತಿದೆ. ಅದು ರಮೇಶ್ ಜಾರಕಿಹೊಳಿ ಜನಪ್ರಿಯತೆ ಮೇಲೆ.

ರಮೇಶ್ ಮತ್ತು ಲಖನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಪೂಜಾರಿ ವಿಜಯಶಾಲಿಯಾಗಿ ಹೊರಹೊಮ್ಮಬಹುದು ಎಂದು ಹೇಳಲಾಗುತ್ತಿದೆ.

ಸ್ಥಳೀಯವಾಗಿ ಕಾಂಗ್ರೆಸ್ ತನ್ನ ಅಧಿಪತ್ಯ ಸ್ಥಾಪಿಸಲು ಜಾರಕಿಹೊಳಿ ಸಹೋದರರು ಸಹಾಯ ಮಾಡಿದ್ದರು. ಉಪ ಚುನಾವಣೆಯಲ್ಲಿ  ರಮೇಶ್ ಪಾಲಿಗೆ ಅತಿ ಮುಖ್ಯವಾಗಿದೆ. ಸಮ್ಮಿಶ್ರ ಸರ್ಕಾರ ಪತನ ಗೊಳಿಸಿದ ರಮೇಶ್ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಹಾಗೂ ಜನಪ್ರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ರಮೇಶ್ ಜಾರಕಿಹೊಳಿಗೆ ತಮ್ಮ ಸಹೋದರರಾದ ಬಾಲಚಂದ್ರ ಮತ್ತು ಭಿಂಶಿ ಬೆಂಬಲ ನೀಡಿದರೇ, ಲಖನ್ ಗೆ ಸತೀಶ್ ಬೆನ್ನೆಲುಬಾಗಿದ್ದಾರೆ,  ಗೋಕಾಕ್  ಉಪ ಚುನಾವಣೆ, ಕಾಂಗ್ರೆಸ್,ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ,  ಹೀಗಾಗಿ ಬಹುತೇಕ ಬಿಜೆಪಿ ನಾಯಕರು ರಮೇಶ್ ಬೆಂಬಲಕ್ಕೆ ನಿಂತಿದ್ದಾರೆ.  ಆದರೆ ಬಿಜೆಪಿಯ ಹಲವು ಮುಖಂಡರು ಅಸಮಾಧಾನ ಹೊಂದಿದ್ದಾರೆ. ಅಶೋಕ್ ಪೂಜಾರಿ ಬಂಡಾಯ ತಣಿಸಲು ಬಿಜೆಪಿ ವಿಫಲವಾಗಿದೆ.  

ಗೋಕಾಕ್ ನಲ್ಲಿ 2.4 ಲಕ್ಷ ಮತದಾರರಿದ್ದು, 1 ಲಕ್ಷಕ್ಕೂಅಧಿಕ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ,ಮತ್ತು 35 ಸಾವಿರ ಕುರುಬ ಮತದಾರರಿದ್ದಾರೆ, ಕಳೆದ ಚುನಾವಣೆಯಲ್ಲಿ ಪೂಜಾರಿ 75 ಸಾವಿರ ಮತಗಳಿಸುವಲ್ಲಿ ಸಫಲರಾಗಿದ್ದರು, ಈ ಬಾರಿ ಚುನಾವಣೆಯಲ್ಲಿ ಲಿಂಗಾಯತ ಮತಗಳ ವಿಭಜನೆಯಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಮತಗಳು ಕೂಡ ವಿಭಜನೆಯಾಗುವ ಸಾಧ್ಯತೆಯಿದೆ, 

ಗೆಲ್ಲುವ ಬಗ್ಗೆ ಪೂಜಾರಿ ಅವರಿಗೆ ವಿಶ್ವಾಸವಿಲ್ಲ,  ಆದರೆ ಫೈಟ್ ಕೊಡಲು ನಿರ್ಧರಿಸಿದ್ದಾರೆ, ಪೂಜಾರಿ ಅವರ ಮನವೊಲಿಸಿ ಕಣಕ್ಕಿಳಿಸದಿದ್ದರೇ ರಮೇಶ್ ಗೆಲ್ಲಲು ಸಹಾಯವಾಗುತ್ತಿತ್ತು, ಎಂದು ಹೇಳಲಾಗುತ್ತಿದೆ. 

SCROLL FOR NEXT