ಸಿದ್ದರಾಮಯ್ಯ 
ರಾಜಕೀಯ

' ಅನರ್ಹ ಶಾಸಕರು ಸಂತೆಯಲ್ಲಿ ದನಗಳಂತೆ ಮಾರಾಟವಾಗಿದ್ದಾರೆ' 

ಅನರ್ಹ ಶಾಸಕರು ಮಾರುಕಟ್ಟೆಯಲ್ಲಿ ದನಗಳಂತೆ ಮಾರಾಟವಾಗಿದ್ದಾರೆ,  ಸಂತೆಯಲ್ಲಿ ಪಶುಗಳಂತೆ ಮಾರಾಟವಾದ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಳಗಾವಿ: ಅನರ್ಹ ಶಾಸಕರು ಮಾರುಕಟ್ಟೆಯಲ್ಲಿ ದನಗಳಂತೆ ಮಾರಾಟವಾಗಿದ್ದಾರೆ,  ಸಂತೆಯಲ್ಲಿ ಪಶುಗಳಂತೆ ಮಾರಾಟವಾದ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅಥಣಿಯ ತೆಲಸಂಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ. ಇದು ಯಾರಿಗೂ ಬೇಡವಾದ ಚುನಾವಣೆ. ಇದರಿಂದ ಯಾರಿಗೆ ಗೆ ಲಾಭ? ನಿಮಗೆ ಲಾಭವಾಗಿಲ್ಲ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್​​ ಅವರಿಗೆ ಲಾಭವಾಗಿದೆ.  ಅಭಿವೃದ್ಧಿಗಾಗಿ ಕಾಂಗ್ರೆಸ್ ಬಿಟ್ಟಿರುವುದಾಗಿ ಹೇಳುತ್ತಿರುವುದು ಅನರ್ಹ ಶಾಸಕರು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. 


ನಿಮ್ಮನ್ನು ಕೇಳದೆ ಬಿಜೆಪಿಗೆ ಹೋಗಿದ್ದು ನಿಮ್ಮನ್ನು ಅವಮಾನ ಮಾಡಿದಂತೆ ಈಗ ನಿಮಗೆ ಅವಕಾಶ ಬಂದಿದೆ. ಕುಮಟಳ್ಳಿ ಸ್ವಂತ ಊರು ತೆಲಸಂಗಕ್ಕೆ ಅವಮಾಡಿದ್ದಾರೆ. ಅಗೌರವ ಮಾಡಿದ ಮಹೇಶ ಕುಮಟಳ್ಳಿ ನೀವು ಎಂಎಲ್ಎ ಆಗಲು ಯೋಗ್ಯರಲ್ಲ ಎಂದು ಹೇಳುವಂತೆ ಮತದಾರರಿಗ ಕರೆ ನೀಡಿದರು, 

ಅನರ್ಹರೆಂದರೆ ಎಂಎಲ್ಎ ಆಗಲು ನಾಲಾಯಕ್ ಎಂದರ್ಥ ನಾಲಾಯಕ್ ಮನುಷ್ಯ ಮತ್ತೆ ತನ್ನನ್ನು ಲಾಯಕ್ ಮಾಡು‌ ಎಂದು ನಿಮ್ಮ ಬಳಿ ಬರ್ತಾನೆ ಆಗ ನೀವು ಸುಪ್ರೀಂ ಕೋರ್ಟ್ ನಿನ್ನನ್ನು ಅನರ್ಹ ಮಾಡಿದೆ ಎಂದು ಪರ್ಮನೆಂಟಾಗಿ ಮನೆಗೆ ಕಳುಹಿಸಿ ಎಂದು  ಅಥಣಿ ಮತದಾರರಿಗೆ ಸಿದ್ದರಾಮಯ್ಯ ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!