ರಾಜಕೀಯ

ಜೇಬಿನಿಂದ ಪರಿಹಾರ ನೀಡುವುದಕ್ಕೆ ಸಾಧ್ಯವಿಲ್ಲ: ಸಂಸದ ಪ್ರತಾಪ್ ಸಿಂಹ

Vishwanath S

ಮೈಸೂರು: ಬಿಜೆಪಿಯ 25 ಜನ ಸಂಸದರನ್ನು ಕಾಂಗ್ರೆಸ್ಸಿಗರು ನಿಂದಿಸಿ ಸಾಕಾಗಿದ್ದು ಈಗ ಪ್ರಧಾನಿ ಮೋದಿಯವರನ್ನು ಬೈಯುವುದಕ್ಕೆ ಶುರು ಮಾಡಿದ್ದಾರೆ. ಈ ತರಹದ ಪ್ರಯತ್ನಕ್ಕೆ ಕೈ ಹಾಕದೆ ಇರುವುದು ಒಳ್ಳೆಯದು. ಏಕೆಂದರೆ ಆಕಾಶವನ್ನು ನೋಡಿ ಉಗುಳಿದಂಗೆ ಆಗುತ್ತದೆ ಅದು ಅವರ ಮುಖಕ್ಕೆ ಬಂದು ಬೀಳುತ್ತದೆ. ಯೋಚನೆ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ವಿಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇಂದು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ವಿರೋಧ ಪಕ್ಷದವರು ನೆರೆ ಪರಿಹಾರದಲ್ಲಿ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ ಎಂದು ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜೊತೆಗೆ ಬಿಜೆಪಿ ಸಂಸದರನ್ನು ಬೈದು ಸಾಕಾಯಿತು ಇನ್ನೂ ಪ್ರಧಾನಿ ಮೋದಿಯವರ ವಿರುದ್ಧ ಮಾತನಾಡುತ್ತಿದ್ದು, ‌ ಇದೊಂದು ರೀತಿ ಆಕಾಶಕ್ಕೆ ಉಗುಳಿದಂಗೆ ಆಗುತ್ತದೆ. ಅದು ನಮ್ಮ ಮೇಲೆ ಬೀಳಲಿದೆ ಎಂದು ವ್ಯಂಗ್ಯವಾಡಿದರು.

ಮೋದಿ ಕರ್ನಾಟಕದ ನೆರೆ ಕುರಿತು ಟ್ವೀಟ್​ ಮಾಡಿಲ್ಲ ಎನ್ನುತ್ತಾರೆ. ಆದರೆ ಅವರು ರಾಜ್ಯಕ್ಕೆ ಗೃಹ ಸಚಿವ ಅಮಿತ್ ಶಾ ಅವರನ್ನು ಕಳುಹಿಸಿದ್ದರು,ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದು ನಿಮಗೆ ಕಾಣುವುದಿಲ್ಲವೇ? ಮೋದಿ ಬಗ್ಗೆ ಮಾತನಾಡುವ ಸಂಸದರಿಗೆ ಧೈರ್ಯ ಇಲ್ಲವೇ ಎಂದು ಪ್ರಶ್ನಿಸುತ್ತಾರೆ. ಕೆಲಸ ಮಾಡುವುದಕ್ಕೆಕೆ ಧೈರ್ಯ ಯಾಕೆ ಬೇಕು? ಪದಬಳಕೆ, ಶಬ್ಧ ಬಳಕೆ ಮಾಡಿ ಟೀಕಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

SCROLL FOR NEXT