ರಾಜಕೀಯ

ನನಗೆ ರಾಜಕಾರಣದ  ಅವಶ್ಯಕತೆಯಿಲ್ಲ- ಎಚ್. ಡಿ. ಕುಮಾರಸ್ವಾಮಿ 

Nagaraja AB

 ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್. ಡಿ.  ಕುಮಾರಸ್ವಾಮಿ ಮತ್ತೆ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನನಗೆ ರಾಜಕಾರಣದ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಮಹದೇಶ್ವರ ಸ್ವಾಮಿ ದೇವಾಲಯದ ಉದ್ಘಾಟನೆ ನಂತರ ಮಾತನಾಡಿದ ಅವರು, ಸಾವಿರಾರು ಪ್ರವಾಹ ಸಂತ್ರಸ್ತ ಕುಟುಂಬಗಳು ಬೀದಿವೆ ಬಿದ್ದಿವೆ.  ಸಂತ್ರಸ್ತರ ಗೋಳು ಕೇಳುವವರಿಲ್ಲ, ರೈತರ ಬೆಳೆ, ಕೃಷಿ ಭೂಮಿ ನಾಶವಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ರೈತರ ಪರ ಕೆಲಸ ಮಾಡಿದ್ದೆ. ಈಗಿನ ರಾಜಕೀಯ ವ್ಯವಸ್ಥೆಯಿಂದ ರೋಸಿ ಹೋಗಿದ್ದೇನೆ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಹಿಂದೆಯೇ ಯೋಚಿಸಿದ್ದೆ. ಆದರೆ, ಜನರ ಆಸೆಯಂತೆ ರಾಜಕಾರಣದಲ್ಲಿ ಮುಂದುವರೆದಿರುವುದಾಗಿ ತಿಳಿಸಿದರು.

ಅಧಿಕಾರ ನನಗೆ ಮುಖ್ಯವಲ್ಲ, ಜನರ ಪ್ರೀತಿ ಮುಖ್ಯವಾಗಿದೆ.  ಬಡವರು, ಒಳ್ಳೆಯವರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಆದಾಗ್ಯೂ, ಕೆಲ ನಾಯಕರು ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಜನರಲ್ಲಿ ಬೇರೆಯದ್ದೇ ಭಾವನೆಯಿದೆ. ನಿಮ್ಮ ಪ್ರೀತಿ ಇಲ್ಲದೆ ರಾಜಕೀಯ ಇಲ್ಲ ಎಂದರು. 

 ಆದಿ ಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಮಾಡಿಲ್ಲ ಎಂದು ಶ್ರೀಗಳ ಸಮ್ಮುಖದಲ್ಲಿ ಸ್ಪಷ್ಟಪಡಿಸಿದ ಮುಖ್ಯಮಂತ್ರಿ  ದೂರವಾಣಿ ಕದ್ದಾಲಿಕೆ ಮಾಡಿ ರಾಜಕೀಯ ಮಾಡುವಂತಹದ್ದು ಏನಿದೆ. ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ ಎಂದರು. 

SCROLL FOR NEXT