ರಾಜಕೀಯ

ಮಹಾರಾಷ್ಟ್ರಕ್ಕೆ ಅಲಮಟ್ಟಿ ನೀರು ಬಿಡುತ್ತೇನೆ ಎಂದಿದ್ದು ನಿಜ: ಸಿಎಂ ಯಡಿಯೂರಪ್ಪ

Lingaraj Badiger

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮಹಾರಾಷ್ಟ್ರಕ್ಕೆ ಅಲ್ಮಟ್ಟಿ ನೀರನ್ನು ಹರಿಸುವುದಾಗಿ ಭರವಸೆ ನೀಡಿದ್ದನ್ನು ದೃಢಪಡಿಸಿದ್ದಾರೆ.

ಗುಲ್ಬರ್ಗಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಮೊದಲು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, "ನಾವು ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಪರಸ್ಪರ ವಿರೋಧಿಗಳಲ್ಲ. ತೀವ್ರ ಬೇಸಿಗೆಯಲ್ಲಿ ಕರ್ನಾಟಕದ ಜನರು ಮಹಾರಾಷ್ಟ್ರದಿಂದ ನೀರನ್ನು ಕೇಳುತ್ತಿದ್ದಾರೆ ಮತ್ತು ತೀವ್ರ ಅಗತ್ಯದ ಸಮಯದಲ್ಲಿ ಅವರು ಕರ್ನಾಟಕದಿಂದ ನೀರನ್ನು ಕೇಳುತ್ತಾರೆ ಎಂದರು.

ಮಹಾರಾಷ್ಟ್ರದ ಸಾಂಗ್ಲಿಯ ಜಟ್ಟಾ ತಾಲ್ಲೂಕಿನಲ್ಲಿ ಗುರುವಾರ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮಹಾರಾಷ್ಟ್ರದ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಅಲ್ಮಟ್ಟಿ ಅಣೆಕಟ್ಟಿನಿಂದ ನೀರನ್ನು ತಿರುಗಿಸಲಾಗುವುದು ಎಂದು ಹೇಳಿದರು.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಭರವಸೆ ಸಾಕಷ್ಟು ಸಾಮಾನ್ಯವಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
     
ಕರ್ನಾಟಕ ಮುಖ್ಯಮಂತ್ರಿಯವರ ಭರವಸೆ ರಾಜ್ಯದಲ್ಲಿ ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು ಮತ್ತು ರೈತರು ಹಾಗೂ ಕಾಂಗ್ರೆಸ್ ಮುಖಂಡರು ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಭರವಸೆಯನ್ನು ಬಲವಾಗಿ ಖಂಡಿಸಿದ್ದರು. ಅಲ್ಲದೆ ಇದು ಅವಕಾಶವಾದಿ ರಾಜಕಾರಣ ಎಂದು ಹೇಳಿದ್ದರು.

SCROLL FOR NEXT