ರಾಜಕೀಯ

ದಿನೇಶ್ ಗುಂಡೂರಾವ್ ಅಧ್ಯಕ್ಷಗಿರಿಯಲ್ಲಿ ಕಾಂಗ್ರೆಸ್ ಸಾಯೋ ಸ್ಥಿತಿ ತಲುಪಿದೆ: ಡಾ. ಕೆ. ಸುಧಾಕರ್

Raghavendra Adiga

ಚಿಕ್ಕಬಳ್ಳಾಪುರ:  ರಾಜ್ಯದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ ಗುಂಡೂರಾವ್ ಪದಗ್ರಹಣ ಮಾಡಿದ ನಂತರ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಮರಣಶಯ್ಯೆಯಲ್ಲಿದೆ ಎಂದು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಟೀಕಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಗ್ರಾಮದಲ್ಲಿ ನೂತನ ಐಟಿಐ ಕಾಲೇಜು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಪಕ್ಷದ ನೊಗ ಹೊತ್ತ ಬಳಿಕವೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯಿತು ಎಂದರು.

"ದಿನೇಶ್ ತಮ್ಮ ಯೋಗ್ಯತೆಯನ್ನು ಮೊದಲು ಅರಿತುಕೊಳ್ಳಬೇಕು.ಅವರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಸಿಎಂ ಯಡಿಯೂರಪ್ಪ ಬಗೆಗೆ ಮಾತನಾಡುವ ನೈತಿಕತೆ ಅವರಿಗಿಲ್ಲ" ಸುಧಾಕರ್ ಹೇಳಿದ್ದಾರೆ.

"ಕಳೆದ ಐದು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕಳೆದ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆಯಲ್ಲಿ ಇಳಿಕೆ ಕಾಂದಿದೆ. 127ಇದ್ದ ಶಾಸಕರ ಸಂಖ್ಯೆ 78ಕ್ಕೆ ಇಳಿದಿತ್ತು. ದಿನೇಶ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಲೋಕಸಭೆ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಕುಸಿದಿದೆ.  

"ಯಾವುದೇ ಸರ್ಕಾರವನ್ನು ಎರಡು ತಿಂಗಳ ಆಡಳಿತ ನೊಡಿ ಮೌಲ್ಯಮಾಪನ ಮಾಡಬಾರದು. ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ" ಅವರು ಹೇಳಿದ್ದಾರೆ.

SCROLL FOR NEXT