ರಾಜಕೀಯ

ಸಿದ್ದು ನಿವಾಸದ ನಾಮಫಲಕ ತೆಗೆದ ಅಧಿಕಾರಿಗಳು: ಕಾವೇರಿಗಾಗಿ ಹಾಲಿ - ಮಾಜಿ ಸಿಎಂಗಳ ಪೈಪೋಟಿ

Nagaraja AB

ಬೆಂಗಳೂರು:  ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನೂ ತೆರವುಗೊಳಿಸಿಲ್ಲ. ಹೀಗಾಗಿ ಸರ್ಕಾರದ ಸೂಚನೆ ಮೇರೆಗೆ ಡಿಪಿಎಆರ್ ಅಧಿಕಾರಿಗಳು ಕಾವೇರಿ ನಿವಾಸದ ಮುಂದೆ ತೂಗುಹಾಕಿದ್ದ ಸಿದ್ದರಾಮಯ್ಯ ಹೆಸರಿನ ನಾಮಫಲಕವನ್ನು ಕಿತ್ತುಹಾಕಿದ್ದು, ಆ ಮೂಲಕ ಆದಷ್ಟುಬೇಗ ನಿವಾಸ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಇನ್ನೂ ಮೂರ್ನಾಲ್ಕು ದಿನಗಳೊಳಗೆ ಕಾವೇರಿ ನಿವಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಾಸ್ತವ್ಯಕ್ಕೆ ಬಿಟ್ಟುಕೊಡಬೇಕು. ನಿಗದಿತ ಸಮಯದೊಳಗೆ ನಿವಾಸ ಖಾಲಿ ಮಾಡದಿದ್ದಲ್ಲಿ ನೀರಿನ ಸಂಪರ್ಕ ಖಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಾವೇರಿ ನಿವಾಸವನ್ನು ವಿರೋಧ ಪಕ್ಷದ ನಾಯಕನಾಗಿರುವ ತಮಗೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಈ ನಿವಾಸವನ್ನು ತಮ್ಮಲ್ಲಿ ಉಳಿಸಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿರುವುದರಿಂದ ಹಾಲಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಯ ನಡುವೆ ಪೈಪೋಟಿ ಆರಂಭಗೊಂಡಿದೆ

SCROLL FOR NEXT