ರಾಜಕೀಯ

ಪ್ರಧಾನಿ ಮೋದಿ ಒಬ್ಬ ವಿದೇಶೀ ಪಿಎಂ, ಗ್ರೇಟ್ ಶೋ ಮ್ಯಾನ್: ಮಾಜಿ ಗೃಹಸಚಿವ ಎಂಬಿ ಪಾಟೀಲ್

Raghavendra Adiga

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರು ವಿದೇ ಶಿ ಪ್ರಧಾನಿಯಾಗಿದ್ದು, ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಅವರಿಗೆ ಯಾವುದರ ಮಾಹಿತಿಯೂ ತಿಳಿದಿಲ್ಲ.ಅವರೊಬ್ಬ ಗ್ರೇಟ್ ಶೋಮ್ಯಾನ್ ಎಂದು ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ತಿಕೋಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಏನಾಗುತ್ತಿದೆ, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ, ಜಿಡಿಪಿ ಕುಸಿತದ ಬಗ್ಗೆ ಎಳ್ಳಷ್ಟು ಮಾಹಿತಿಯಿಲ್ಲ. ಅವರು ಭಾರತದ ಪ್ರಧಾನಿ ಅಲ್ಲ. ವಿದೇಶಿ ಪ್ರಧಾನಿಯಾಗಿದ್ದು, ಒಬ್ಬ ಗ್ರೇಟ್ ಶೋ ಮ್ಯಾನ್ ಎಂದು ಅವರು ಲೇವಡಿ ಮಾಡಿದರು.

ಅನರ್ಹ ಶಾಸಕರ ಕುರಿತು ಪ್ರತಿಕ್ರಿಯಿಸಿದ ಅವರು,ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿಯಬೇಕು.ಅಂದಾಗ ಮಾತ್ರ ಮತ್ತೊಮ್ಮೆ ಇಂತಹ ಕೆಲಸಕ್ಕೆ ಬೇರೆ ಯಾವ ಶಾಸಕರು ಕೈ ಹಾಕುವುದಿಲ್ಲ.ಅನರ್ಹ ಶಾಸಕರಿಂದಾಗಿ 17 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಬೇಕಾಗಿದೆ. ಚುನಾವಣೆ ನಡೆದರೇ ಜನರ ಮೇಲೆ ಆರ್ಥಿಕ ಹೊರೆ ಬೀಳಲಿದೆ. ಜನರ ದುಡ್ಡಿನಲ್ಲಿ ಚುನಾವಣೆ ಆಗುತ್ತದೆಯೇ ಹೊರತು ಅನರ್ಹ ಶಾಸಕರ ದುಡ್ಡಿನಲ್ಲಿ ಅಲ್ಲ ಎಂದರು

SCROLL FOR NEXT