ರಾಜಕೀಯ

ಮುಖ್ಯಮಂತ್ರಿ ಹುದ್ದೆ ಬಂದರೂ ತೊರೆಯುತ್ತೇನೆ- ಮಾಧುಸ್ವಾಮಿ

Nagaraja AB

ಬೆಂಗಳೂರು: ವಾಕ್ ಚಾತುರ್ಯ ದಿಂದ ಹೆಸರಾಗಿರುವ ಚಿಕ್ಕನಾಯಕಹಳ್ಳಿ ಶಾಸಕ ಜೆ. ಸಿ. ಮಾಧುಸ್ವಾಮಿ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆದಿರುವುದು ಕೆಲವರ ಹುಬ್ಬೇರಿಸಿದೆ. ಆದರೆ, ಮಾಧುಸ್ವಾಮಿ ಯಡಿಯೂರಪ್ಪ ಅವರ ನಿಷ್ಣಾತರಾಗಿದ್ದಾರೆ. ಈ ವಿಚಾರದಲ್ಲಿ ಪ್ರಶ್ನೆಯೇ  ಇಲ್ಲ ಎಂದು ಅವರು ದಿ ನ್ಯೂ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.


ಮೊದಲ ಬಾರಿಗೆ ಸಚಿವರಾಗಿರುವ ಜೆಸಿ ಮಾಧುಸ್ವಾಮಿಗೆ ಹಲವು ಸವಾಲುಗಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಕಾನೂನುಬದ್ಧವಾಗಿ ನಡೆಯುತ್ತಿದ್ದರೆ  ಅಧಿಕಾರಿಶಾಹಿ ನಿರ್ವಹಣೆ ತೊಂದರೆಯೇ ಅಲ್ಲ. ಇದಕ್ಕೆ ಪ್ರವಾಹದ ನಿರ್ವಹಣೆಯೇ ಸ್ಪಷ್ಪ ಉದಾಹರಣೆಯಂತಿದೆ. ಎಲ್ಲಾ ಅಧಿಕಾರಿಗಳು ಸಹಕರಿಸಿದ್ದಾರೆ. ಎಲ್ಲವೂ ನಾಯಕತ್ವ ಹಾಗೂ ಅವರ ದಕ್ಷತೆ ಮೇಲೆ ಅವಲಂಬಿತವಾಗಿರುತ್ತವೆ ಎಂದರು.


ಕಾನೂನು ಸಚಿವರಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಅಂದಾಜು 32 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮೂಲಭೂತ ಸೌರ್ಯ ಅಭಿವೃದ್ಧಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.  ಕಾನೂನು ಸುಧಾರಣೆ ಹಾಗೂ ಬದಲಾವಣೆಗಳ ಬಗ್ಗೆ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.


ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಒಂದಾದ ನಂತರ ಒಂದರಂತೆ  ಈ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಮೊಫುಸಿಲ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಇಲ್ಲದಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವುದಾಗಿ ಹೇಳುವ ಸಚಿವರು, ಎಲ್ಲ ಕೆರಗಳಲ್ಲಿನ ಹೂಳು ತೆಗೆಸಿ ನೀರು ಸುಗಮವಾಗಿ ಸಾಗುವಂತೆ ಮಾಡಲಾಗುವುದು ಎಂದರು. 


ಅಮಿತ್ ಶಾ, ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಇಷ್ಟಪಡುವಂತೆ ತಾನು ಬಿಜೆಪಿ ಕಾರ್ಯಕರ್ತನಾಗಿದ್ದೇನೆ. ಯಡಿಯೂರಪ್ಪ ಅವರ ಬಗ್ಗೆ ಹೊಂದಿರುವ ನಿಷ್ಠೆಯ ಬಗ್ಗೆ ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಹೈಕಮಾಂಡರ್ ಸಿಎಂ ಹುದ್ದೆ ನೀಡಿದ್ದರೂ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು. 


ಕಾಂಗ್ರೆಸ್ ಮುಖಂಡ , ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರದಲ್ಲಿ ಕಾನೂನು ಪ್ರಕಾರ ಇಡಿ ಕ್ರಮ ಕೈಗೊಳ್ಳಲಿದೆ.ರಾಜ್ಯದಲ್ಲಿನ ನೆಲ, ಸಂಸ್ಕೃತಿ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.  ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

SCROLL FOR NEXT