ರಾಜಕೀಯ

ದೇಶಭಕ್ತರು ಬಿಜೆಪಿಗೆ ವೋಟ್ ಹಾಕ್ತಾರೆ, ಪಾಕ್ ಪರವಾಗಿರೋರು ಅಲ್ಲ:ಸಚಿವ ಈಶ್ವರಪ್ಪ

Raghavendra Adiga

ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ!

ಬೆಂಗಳೂರು: ದೇಶಭಕ್ತರು ಬಿಜೆಪಿಗೆ ವೋಟ್ ಹಾಕುತ್ತಾರೆ. ಪಾಕಿಸ್ತಾನದ ಪರವಾಗಿರುವವರು ನಮಗೆ ಮತ ಹಾಕಲ್ಲ, ನನ್ನ ಕ್ಷೇತ್ರದಲ್ಲಿ ನಾನೆಂದಿಗೂ ಒಬ್ಬ ಮುಸ್ಲಿಂನಿಗೂ ವೋಟ್ ಹಾಕಿ ಅಂತ ಕೈ ಮುಗಿದು ಕೇಳಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ನಮ್ಮ ಕ್ಷೇತ್ರದಲ್ಲಿ ಕೆಲವು ಕಾಂಗ್ರೆಸ್ ಶಾಸಕರಿದ್ದು ಅವರಿಗೂ ಬಿಜೆಪಿಗೆ ಬರೋ ಆಸೆ ಇದೆ. ನಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 50 ಸಾವಿರ ವೋಟ್ ಗಳಿವೆ. ಆದರೆ ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದರೂ 47 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ ಎಂದು ಅವರು ಹೇಳಿದ್ದಾರೆ.

ಶ್ರೀರಾಮಸೇನೆಯ ಆಯೋಜನೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರ ಭಕ್ತ ಮುಸ್ಲಿಂ ಬಿಜೆಪಿಗೆ ವೋಟ್ ಹಾಕುತ್ತಾರೆ. ಪಾಕಿಸ್ತಾನ ಪರ ಇರೋ ಮುಸ್ಲಿಂ ಬಿಜೆಪಿಗೆ ವೋಟ್ ಹಾಕಲು ಹಿಂದೆ ಮುಂದೆ ನೋಡುತ್ತಾನೆ ಎಂದು ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

ಮುಸ್ಲಿಮ್ ಸಮುದಾಯದ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರು ಹಿಜಡಾಗಳು ಎಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.

ಹಲವು ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ಪಕ್ಷ ಸೇರಲು ಸಿದ್ಧರಿದ್ದಾರೆ. ಆದರೆ, ಅವರಿಗೆ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿನ ಮುಸ್ಲಿಮರ ಮತ ಕೈತಪ್ಪುವ ಭೀತಿ ಇದೆ. ಅಲ್ಲದೆ, ಅವರೆಲ್ಲರೂ ಹಿಜಡಾಗಳು, ಹೀಗಾಗಿಯೇ ಬಿಜೆಪಿ ಸೇರಿಲ್ಲ. ಪಾಕಿಸ್ತಾನವನ್ನು ಬೆಂಬಲಿಸುವವರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಐದು ವರ್ಷಗಳ ಕಾಲ ಲಾಟರಿ ಹೊಡೆದು ಮುಖ್ಯಮಂತ್ರಿಯಾಗಿದ್ದರು, ಬಿಜೆಪಿ, ಕೆಜೆಪಿ ಎಂದು ನಮ್ಮ ಪಕ್ಷ ಇಬ್ಬಾಗವಾಗಿದ್ದ ಕಾರಣ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು ಎಂದು ಹಿರಿಯ ಬಿಜೆಪಿ ನಾಯಕ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಹೇಡಿ ಸರ್ಕಾರ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಅಷ್ಟಕ್ಕೂ ಐದು ವರ್ಷ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿ ಎನು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಯಾವ ಹಿಂದುಳಿದವರು,ದಲಿತರನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಸಿದ್ದರಾಮಯ್ಯ ಓರ್ವ ಗೋಸುಂಬೆ ರಾಜಕಾರಣಿ, ನಮ್ಮನ್ನು(ಬಿಜೆಪಿ ಸರ್ಕಾರ) ಹೇಡಿ ಎಂದು ಕರೆಯುವುದಾದರೆ, ಅವರಿಗೆ ಹಿಜಡಾತನ ಇದೆ ಅವರು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಕಾಲಿನ ಗುಣದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ನಾಶವಾಗಿ ಹೋಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೊಯ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 35 ಸಾವಿರ ಓಟ್ ಗಳಿಂದ ಅವರು ಸೋತರು. ಸಿದ್ದರಾಮಯ್ಯ ಅವರಿಂದಾಗಿಯೇ ಕಾಂಗ್ರೆಸ್ ಗೆ ಈ ಗತಿ ಬಂದಿದೆ. ಯಡ್ಡಿಯೂರಪ್ಪ ನವರ ಬಗ್ಗೆ ಯಾಕೆ ಹೀಗೇ ಮಾತನಾಡುತ್ತಿದ್ದಾರೇ ಅನ್ನುವುದು ನಂಗೇ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರವಾಹ ಎದುರಾಗಿಲ್ಲ ..ದೇಶದ ಹತ್ತು ರಾಜ್ಯಗಳಲ್ಲಿ ಜಲಪ್ರಳಯ ಬಂದಿದೆ, ಯಡ್ಡಿಯೂರಪ್ಪ ಕಾಲಗುಣದಿಂದ ಹತ್ತು ರಾಜ್ಯಗಳಲ್ಲಿ ಜಲಪ್ರಳಯ ಅಯ್ತಾ?. ಮೂಢನಂಬಿಕೆಯಲ್ಲಿ ನಂಬಿಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಅವರಿಗೆ ರಾಜ್ಯದಲ್ಲಿ ಭವಿಷ್ಯ ವಿಲ್ಲ, ಕಾಂಗ್ರೆಸ್ ಪಕ್ಷಕ್ಕೂ ರಾಜ್ಯದಲ್ಲಿ ಭವಿಷ್ಯ ವಿಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು

ಇದೇ ವೇಳೆ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಗೋ ಹತ್ಯೆ ನಿಷೇಧ ಮಾಡುತ್ತದೆ. ಎಂದು ಈಶ್ವರಪ್ಪ ಭರವಸೆ ನಿಡಿದ್ದಾರೆ.

SCROLL FOR NEXT