ರಾಜಕೀಯ

ರೋಷನ್ ಬೇಗ್ ಗೆ ರಕ್ಷಣೆ ನೀಡವಂತೆ ಎಸ್ ಐಟಿಗೆ ರಾಜ್ಯಪಾಲರ ನಿರ್ದೇಶನ 

Nagaraja AB

ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರೋಷನ್ ಬೇಗ್ ಅವರಿಗೆ ರಕ್ಷಣೆ ಹಾಗೂ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ಎಸ್ ಐಟಿ ಮುಖ್ಯಸ್ಥರಿಗೆ ರಾಜ್ಯಪಾಲರು ಪತ್ರ ಬರೆದು ನಿರ್ದೇಶನ ಮಾಡಿದ್ದಾರೆ. 

ಐಎಂಎ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಭಾಗಿ ಆರೋಪದ ಹಿನ್ನೆಲೆಯಲ್ಲಿ ಜುಲೈ 16, 2019 ರಂದು ಎಸ್ ಐಟಿ ತಂಡ ಶಿವಾಜಿ ನಗರದ ಮಾಜಿ ಶಾಸಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿತ್ತು. ಆದರೆ, ಎಸ್ ಐಟಿ ತನಿಖಾ ದಳ ರೋಷನ್ ಬೇಗ್ ಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.  ಎಸ್ ಐಟಿ ತನಿಖೆಗೆ ರೋಷನ್ ಬೇಗ್ ಸರಿಯಾಗ ಸಹಕಾರ ನೀಡಿರಲಿಲ್ಲ ಎಂಬ ಆರೋಪವಿದೆ.

ಈ ನಡುವೆ ಎಸ್ ಐಟಿಯಿಂದ ತಮಗೆ ರಕ್ಷಣೆ ನೀಡುವಂತೆ ಅನರ್ಹ ಶಾಸಕ ರೋಷನ್ ಬೇಗ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿರುವ ರಾಜ್ಯಪಾಲರು ಎಸ್ ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ನಿರ್ದೇಶನ ನೀಡುವ ಮೂಲಕ ವಂಚನೆ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎನ್ನಲಾಗಿದೆ.

SCROLL FOR NEXT