ರಾಜಕೀಯ

ರಾಜ್ಯದ 4ನೇ ಡಿಸಿಎಂ ಆಗಲಿದ್ದಾರಾ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ

Shilpa D

ಬೆಳಗಾವಿ: ಅನರ್ಹಗೊಂಡಿರುವ 17 ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಕ್ಲೀನ್ ಚಿಟ್ ಪಡೆಯಲು ಹೋರಾಡುತ್ತಿದ್ದರೇ,. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಕರ್ನಾಟಕದ 4ನೇ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದರೇ   ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಜಲಸಂಪನ್ಮೂಲ ಖಾತೆಯನ್ನು ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದು, ಅನರ್ಹ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು, ಅವರಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಉಸ್ತುವಾರಿ ಸಚಿವರನ್ನಾಗಿ ನೇಮಿಸುವುದರ ಜೊತೆಗೆ ಮಹತ್ವದ ಹುದ್ದೆಗಳನ್ನು ನೀಡಲಿದೆ ಎಂದು ಇತ್ತೀಚೆಗೆ ಶಾಸಕ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಹಲವು ಊಹಾ ಪೋಹಗಳನ್ನು ಸೃಷ್ಟಿಸಿದೆ.

ರಮೇಶ್ ಮತ್ತು ಇತರ ಬಂಡಾಯ ಶಾಸಕರು ಸಮ್ಮಿಶ್ರ ,ಸರ್ಕಾರವನ್ನು ಪತನಗೊಳಿಸಿದ್ದಾರೆ, ಅದು ಸಣ್ಣ ಸಾಧನೇಯನಲ್ಲ ಎಂದು ಹೇಳಿರುವ ಸತೀಶ್,  ರಮೇಶ ಜಾರಕಿಹೊಳಿಗೆ ಯಾವುದೇ ಭಯವಿಲ್ಲ. ಅವರು ಖಾಲಿ ಕೈಯಲ್ಲಿ ಇದ್ದಾರೆ. ರಮೇಶನ ಆಸ್ತಿ ಅಳಿಯ ಅಂಬಿರಾವ್ ಪಾಟೀಲ್ ಹೆಸರಿಗೆ ಆಗಿದೆ. "ನಾನು ಸಾಲಗಾರ" ಎಂದು ಗೋಕಾಕ್ ಸಮಾವೇಶದಲ್ಲಿ ಹೇಳಿದ್ದಾರೆ. ಅವರ ಆಸ್ತಿಯನ್ನು ಅಳಿಯ ಅಂಬಿರಾವ್ ತೆಗೆದುಕೊಂಡು ಹೋಗಿದ್ದಾರೆ. ಆದ್ದರಿಂದಲೇ ತಾನು ಸಾಲಗಾರ ಎಂದು ಹೇಳಿದ್ದಾನೆ. ರಮೇಶ ಜಾರಕಿಹೊಳಿ ಡಿಸಿಎಂ, ಜಲಸಂಪನ್ಮೂಲ ಸಚಿವರಾಗಲಿ. ಆ ನಂತರ ಗೋಕಾಕ್ ನಲ್ಲಿ ಬೃಹತ್ ಸಭೆ ಮಾಡುತ್ತೇವೆ. ಆಗ ರಮೇಶ ಜಾರಕಿಹೊಳಿ ವಸ್ತು ಕಳೆದುಕೊಂಡ ವಿಚಾರದ ಬಗ್ಗೆ ಸಭೆಯಲ್ಲಿ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

SCROLL FOR NEXT