ರಾಜಕೀಯ

ಅನರ್ಹ ಶಾಸಕರು ಸ್ವಾತಂತ್ರ ಹೋರಾಟಗಾರರಲ್ಲ, ಆರ್.ಶಂಕರ್ ಗೆ ಬಿಜೆಪಿ ಟಿಕೆಟ್ ಬೇಡ: ಬಸವರಾಜ್ ಕೇಲಗಾರ 

Raghavendra Adiga

ಹಾವೇ‍ರಿ: ಅನರ್ಹ ಶಾಸಕರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ.ಅವರ ತ್ಯಾಗ, ಹೋರಾಟ ಎಂಬುದಿಲ್ಲ.ಅವರು ಅಧಿಕಾರದ ಆಸೆ ಇಟ್ಟುಕೊಂಡೇ ಮೈತ್ರಿ ಸರ್ಕಾರದಿಂದ ಹೊರಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ, ಸಚಿವರನ್ನಾಗಿ ಮಾಡಿ, ಆದರೆ ಟಿಕೆಟ್ ನಮಗೆ ಕೊಡಿ ಎಂದು ರಾಣೆ ಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸವರಾಜ ಕೇಲಗಾರ ಪಕ್ಷಕ್ಕೆ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಣಿಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಆರ್​ ಶಂಕರ್​​ ಅವರಿಗೆ ಟಿಕೆಟ್ ನೀಡಿದರೇ ಪಕ್ಷಕ್ಕೆ ಹಾನಿಯಾಗುವುದು ಖಚಿತ.ಅನರ್ಹ ಶಾಸಕರಿಂದಲೇ ರಾಜ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಅವರೇನು ಸ್ವಾತಂತ್ರ್ಯ ಹೋರಾಟಗಾರರಲ್ಲ.ಅವರ ತ್ಯಾಗ, ಹೋರಾಟ ಎಂಬುದಿಲ್ಲ.ಅವರೂಅಧಿಕಾರದ ಆಸೆ,ಆಕಾಂಕ್ಷೆ ಇಟ್ಟುಕೊಂಡೇ ಮೈತ್ರಿ ಸರ್ಕಾರದಿಂದ ಹೊರಬಂದಿದ್ದಾರೆ. ಅವರಿಗೆ ಅಧಿಕಾರ ಕೊಡಿ, ಸಚಿವರನ್ನಾಗಿ ಮಾಡಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ, ಮಂತ್ರಿ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ. ಆದರೆ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಬೇಡಿ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದರು.

ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಕ್ಕಿತ್ತು.ಆದರೂ 50 ಸಾವಿರ ಮತಗಳನ್ನು ಪಡೆದಿದ್ದೇನೆ , ಹೀಗಾಗಿ ಹೈಕಮಾಂಡ್ ಟಿಕೆಟ್ ನೀಡುವ ವಿಶ್ವಾಸವಿದೆ. ನಾನು ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಿಲ್ಲ. ಬಿಜೆಪಿ ನಮ್ಮ ಮನೆ, ಅಲ್ಲಿಯೇ ಗಟ್ಟಿಯಾಗಿ ನಿಂತು ಬಿ ಫಾರಂ ತೆಗೆದುಕೊಳ್ಳುತ್ತೇನೆ. ಹೈಕಮಾಂಡ್ ಕೂಡ ಅಳೆದು ತೂಗಿ ಟಿಕೆಟ್ ಕೊಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

SCROLL FOR NEXT