ರಾಜಕೀಯ

ಉಪ ಚುನಾವಣೆ: ನಿಷ್ಠೆ ಪಕ್ಷಕ್ಕೋ, ನಾಯಕನಿಗೋ? ಅಡಕತ್ತರಿಯಲ್ಲಿ ಸ್ಥಳೀಯ ನಾಯಕರು!

Shilpa D

ಬೆಂಗಳೂರು: ಅನರ್ಹ ಶಾಸಕರ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಕೇವಲ ಶಾಸಕರು ಮಾತ್ರ ಗೊಂದಲದಲ್ಲಿ ಮುಳುಗಿಲ್ಲ,  ಸ್ಥಳೀಯ ಕಾರ್ಯಕರ್ತರು ಹಾಗೂ ಕೌನ್ಸಿಲರ್ ಮತ್ತು ಪಂಚಾಯಿತಿ ಸದಸ್ಯರುಗಳು ಕೂಡ ಫುಲ್ ಕನ್ ಫ್ಯೂಸ್ ಆಗಿದ್ದಾರೆ.
 
ಅನರ್ಹರಲ್ಲಿ 12 ಕಾಂಗ್ರೆಸ್ ಶಾಸಕರಿದ್ದು, ಉಳಿದ ಮೂವರು ಜೆಡಿಎಸ್ ಶಾಸಕರಿದ್ದಾರೆ, ಹಿಂದಿನ ಚುನಾವಣೆಯಲ್ಲಿ ಈ ಶಾಸಕರು ಗೆದ್ದು ಬರುವಲ್ಲಿ ಬೆಂಬಲ ನೀಡಿದ್ದ ಮುಖಂಡರು ಈಗ ಡೈಲಮಾದಲ್ಲಿದ್ದಾರೆ, ತಮ್ಮ ನಿಷ್ಠೆ ತಮ್ಮ ನಾಯಕನಿಗೋ ಅಥವಾ ಪಕ್ಷಕ್ಕೆ ನೀಡುವುದೋ ಎಂಬ ಗೊಂದಲದಲ್ಲಿದ್ದಾರೆ,

ಬೆಂಗಳೂರಿನ ಯಶವಂತಪುರ, ಕೆ.ಆರ್ ಪುರಂ, ಶಿವಾಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ, ಕಾಂಗ್ರೆಸ್ ಶಾಸಕರಿದ್ದಾರೆ, ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು,. ಪ್ರತಿಯೊಂದು ವಿಧಾನ ಸಭೆ ಕ್ಷೇತ್ರಗಳಲ್ಲಿ 8 ಬಿಬಿಎಂಪಿ ವಾರ್ಡ್ ಗಳಿದ್ದು, ಎರಡರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಕೌನ್ಸಿಲರ್ ಗಳಿದ್ದಾರೆ.

ಯಶವಂತಪುರ ವಿಧಾನಸಬೆ ಕ್ಷೇತ್ರಗಳಲ್ಲಿ ಮೂರು ಬಿಬಿಎಂಪಿ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕೌನ್ಸಿಲರ್ ಗಳಿದ್ದಾರೆ, ಯಶವಂತಪುರ ಶಾಸಕ ಎಸ್ ,ಟಿ ಸೋಮಶೇಖರ್ ಅನರ್ಹಗೊಂಡಿದ್ದಾರೆ. ಕೆ.ಆರ್ ಪುರಂ ನಲ್ಲಿ  ಭೈರತಿ ಬಸವರಾಜ್ ಅವರಿಗೆ ಇಬ್ಬರು ಕಾಂಗ್ರೆಸ್ ಕೌನ್ಸಿಲರ್ ಗಳು ಬೆಂಬಲಿಸಿದ್ದರು.

ಇನ್ನೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಇಬ್ಬರು ಜೆಡಿಎಸ್ ಕೌನ್ಸಿಲರ್ ಗಳು ಅನರ್ಹ ಶಾಸಕ ಗೋಪಾಲಯ್ಯ ಅವರನ್ನು ಬೆಂಬಲಿಸಿದ್ದರು. ಹೀಗಾಗಿ ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲಿ ಗೊಂದಲು ಮೂಡಿದೆ ತಮ್ಮ ನಾಯಕನನ್ನು ಬೆಂಬಲಿಸಬೇಕೋ ಅಥವಾ ಪಕ್ಷಕ್ಕೆ ನಿಷ್ಠೆ ತೋರಿಸಬೇಕೋ ಎಂಬ  ಗೊಂದಲದಲ್ಲಿ ಸಿಲುಕಿದ್ದಾರೆ.

SCROLL FOR NEXT