ರಾಜಕೀಯ

ಅನರ್ಹ ಶಾಸಕರ ಪರಿಸ್ಥಿತಿ ಬದಲಾಗಿಲ್ಲ, ಸುಪ್ರೀಂ ತೀರ್ಪಿಗೆ ಸ್ವಾಗತ: ದಿನೇಶ್ ಗುಂಡೂರಾವ್

Raghavendra Adiga

ಬೆಂಗಳೂರು:  ಸುಪ್ರಿಂ ಕೋರ್ಟ್ ತೀರ್ಪು ನ್ನು ನಾವು ಸ್ವಾಗತ ಮಾಡುತ್ತೇವೆ. ಅನರ್ಹರು, ಅಸಹಾಯಕರು, ಅತೃಪ್ತರು ಶಾಸಕರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಕೊಡಿ,ರಾಜೀನಾಮೆ ಅಂಗೀಕಾರ ಮಾಡದೇ ಇರುವುದು ಸರಿಯಲ್ಲ ಎಂದು ಅತೃಪ್ತರು ಹೇಳಿದ್ದರು. ನಮ್ಮ ವಾದ ಖಂಡಿತವಾಗಿ ಸುಪ್ರಿಂ ಕೋರ್ಟ್ ಗೆ ಮನವರಿಕೆ ಆಗಿದೆ. ಅಂದಿನ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ತೀರ್ಪನ್ನು ಕೋರ್ಟ್ ತಡೆಹಿಡಿದಿಲ್ಲ.ಯಾರು ಜನರ ಮತಗಳನ್ನು ವ್ಯಾಪಾರಕ್ಕೆ ಬಳಸಿಕೊಂಡಿದ್ದರೋ ಅವರಿಗೆ ಪಾಠ ಕಲಿಸಿದರು. ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಕೊಡಬಾರದು ಎಂದು ರಮೇಶ್ ಕುಮಾರ್ ಆದೇಶ ಮಾಡಿದ್ದರು ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯ.ಈ ದ್ರೋಹಿಗಳಿದ್ದಾರಲ್ಲ, ರಾಜಕೀಯ ವ್ಯಭಿಚಾರ ಮಾಡುವವರಿಗೆ ಏನೂ ರಿಲೀಫ್ ಸಿಕ್ಕಿಲ್ಲ. ಆ ಖಾತೆ ಸಿಗುತ್ತದೆ,ಈ ಖಾತೆ ಸಿಗುತ್ತದೆ ಅಂದುಕೊಂಡವರ ಆಸೆ ಈಡೇರಿಲ್ಲ.ಈಗಿನ ಸ್ಪೀಕರ್ ಅವರ ಲಾಯರ್ ಕೂಡ ಬೇರೆ ರೀತಿ ವಾದ ಮಾಡಿದ್ದಾರೆ. ಬ್ಯಾಟರಿ ಆಫ್ ಲಾಯರ್ಸ್ ಇದ್ದರೂ ಅವರ ವಾದ ಅಷ್ಟು ಚೆನ್ನಾಗಿದ್ದಿದ್ದರೆ ಸುಪ್ರೀಂ ಕೋರ್ಟ್ ಇಂದೇ ಅನರ್ಹತೆ ರದ್ದು ಗೊಳಿಸುತ್ತಿತ್ತು. ನಮ್ಮ ವಕೀಲರು, ಸ್ಪೀಕರ್ ಆದೇಶದ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ. ರಮೇಶ್ ಕುಮಾರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಬರುವ ತೀರ್ಪು ಇಡೀ ದೇಶಕ್ಕೆ ಮಾದರಿಯಾದ ತೀರ್ಪಾಗಿರುತ್ತದೆ. ಅನರ್ಹರಿಗೆ ಬಿಡುಗಡೆ ಎಲ್ಲಿ ಸಿಕ್ಕಿದೆ ? ಇನ್ನೂ ಕೂಡ ಅವರು ಅನರ್ಹರೇ, ಅತೃಪ್ತರೇ, ಅಸಹಾಕಯರೇ. ಮುಂದಿನ ತಿಂಗಳ ಆಗಲಿ, ಕಾದು ನೋಡೋಣ, ಇದು ಸಂವಿಧಾನ ಪೀಠಕ್ಕೆ ಹೋಗಬೇಕೋ ಏನೋ ಗೊತ್ತಿಲ್ಲ ಎಂದರು.
 

SCROLL FOR NEXT