ಬೆಂಗಳೂರು: ಅನರ್ಹ ಶಾಸಕರನ್ನು ಜಾತ್ಯಾತೀತ ಜನತಾದಳ ಪಕ್ಷ (ಜೆಡಿಎಸ್) ಗ್ಯಾಂಗ್ರಿನ್ ಗೆ ಹೋಲಿಸಿದೆ.
ಹಣದ ಆಸೆಗೆ ಕಾಂಗ್ರೆಸ್-ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದ ಅನರ್ಹ ಶಾಸಕರು ಗ್ಯಾಂಗ್ರಿನ್ ಇದ್ದಂತೆ. ಅದರ ಅನುಭವ ಈಗ ಬಿಜೆಪಿ ಸರ್ಕಾರಕ್ಕೂ ಆಗಿದೆ ಎಂದು ಟೀಕಿಸಿದೆ.
ಹಣದ ಆಸೆಗಾಗಿ ಮೈತ್ರಿ ಸರ್ಕಾರವನ್ನು ಬೀಳಿಸಿದ ಅತೃಪ್ತ ಶಾಸಕರು ಬಿಜೆಪಿಯ ಕಣ್ಣಿಗೆ ದೇವರಂತೆ ಕಂಡಿದ್ದರು. ಈಗ ಅದೇ ಅತೃಪ್ತರನ್ನು ಎರಡೇ ತಿಂಗಳಿನಲ್ಲಿ ಬಿಜೆಪಿಯ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ "ದರಿದ್ರ ಮಕ್ಕಳು" ಎಂದು ಕರೆಯುತ್ತಿದ್ದಾರೆ ಎಂದು ಅಧಿಕೃತ ಖಾತೆಯಲ್ಲಿ ಜೆಡಿಎಸ್ ಟ್ವೀಟ್ ಮಾಡಿದೆ.