ಬೆಂಗಳೂರು: ನಾವಿನ್ನೂ ಕಾಂಗ್ರೆಸ್ ನಲ್ಲಿ ಇದ್ದೇವೆ, ಕಾಂಗ್ರೆಸ್ ನಿಂದ ನಮ್ಮನ್ನು ಯಾವನು ಉಚ್ಚಾಟನೆ ಮಾಡುತ್ತಾನೆ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಗ್ಯಾಂಗ್ರೀನ್ ಎಂಬ ಜೆಡಿಎಸ್ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜೆಡಿಎಸ್ ನವರು ಅವರ ಪಕ್ಷದ ಅನರ್ಹ ಶಾಸಕರನ್ನು ಕೇಳಿಕೊಳ್ಳಲಿ, ನಮ್ಮ ತಂಟೆಗೆ ಏಕೆ ಬರುತ್ತಾರೆ.ನಮ್ಮ ಪ್ರಶ್ನೆ ಮಾಡುವ ಹಕ್ಕು ಜೆಡಿಎಸ್ ಗಿಲ್ಲ ಎಂದು ಅವರು ಕಿಡಿ ಕಾರಿದರು.