ರಾಜಕೀಯ

ಬೆಂಗಳೂರು ಗಲಭೆ ಪ್ರಕರಣ: ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರಗೊಂಡ ವಾಕ್ಸಮರ

Manjula VN

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರ ತೀವ್ರಗೊಂಡಿದೆ. 

ಗಲಭೆ ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು, ಗಲಭೆ ಹಿಂದೆ ಬಿಜೆಪಿ ದೊಡ್ಡ ದೊಡ್ಡ ನಾಯಕರ ಕೈವಾಡವಿದೆ. ಕೊರೋನಾ ಉಪಕರಣದಲ್ಲಿ ನಡೆದಿರುವ ಭ್ರಷ್ಟಚಾರವನ್ನು ಮುಚ್ಚಿಹಾಕಲು ನಡೆದಿರುವ ಯತ್ನಗಳಿವು ಎಂದು ಹೇಳಿದ್ದಾರೆ. 

ಯಡಿಯೂರಪ್ಪ ಅವರೊಂದಿಗಿರುವ ಪ್ರಾಮಾಣಿಕರಿಂದಲೇ ಮುಖ್ಯಮಂತ್ರಿಗಳನ್ನು ಬದಲಾಯಿರು ಕೆಲ ನಾಯಕರು ಕಠಿಣ ಶ್ರಮ ಪಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯುವಂತೆ ಮಾಡಿ ರಾಷ್ಟ್ರ ಮಟ್ಟದ ಸುದ್ದಿಯಾಗುವಂತೆ ಮಾಡಿ ಮುಖ್ಯಮಂತ್ರಿಗಳಿಗೆ ಕೆಟ್ಟ ಹೆಸರು ತಲು ಯತ್ನಿಸುತ್ತಿದ್ದಾರೆ. ಬಿಜೆಪಿ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ (ಎಸ್'ಡಿಪಿಐ) ಒಟ್ಟಾಗಿ ಕೆಲಸ ಮಾಡುತ್ತಿದ್ದು, ಹಿಂಸಾಚಾರದ ಪ್ರೇರಕ ಶಕ್ತಿಯಾಗಿರುವ ಎಸ್'ಡಿಪಿಐ ಬಿಜೆಪಿಯ ತಂಡವಾಗಿದೆ ಎಂದು ಆರೋಪಿಸಿದ್ದಾರೆ.
 
ನವೀನ್ ಪಿ ಎಂಬ ವ್ಯಕ್ತಿ ಫೇಸ್ಬುಕ್ ನಲ್ಲಿ ಹಾಕಿದ ಪೋಸ್ಟ್ ನಿಂದ ಗಲಭೆ ಸೃಷ್ಟಿಯಾಗಿದೆ. ನವೀನ್ ಆರ್'ಎಸ್ಎಸ್ ಕಾರ್ಯಕರ್ತನಾಗಿದ್ದು, ಬಿಜೆಪಿ ಜೊತೆಗೆ ಈತ ನಂಟು ಹೊಂದಿದ್ದ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿರುವ ಪೋಸ್ಟ್ ಸಾಕ್ಷಿಯಾಗಿದೆ ಎಂದಿದ್ದಾರೆ. 

ಈ ನಡುವೆ ಎಂಎಲ್'ಸಿ ಎ.ಹೆಚ್.ವಿಶ್ವನಾಥ್ ಅವರು ಹೇಳಿದೆ. ವಿಚಾರವನ್ನು ಕಾಂಗ್ರೆಸ್ ರಾಜಕೀಯ ಮಾಡುತ್ತಿರವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯನ್ನು ಧ್ವಂಸಗೊಳಿಸಿದ್ದು ಕಾಂಗ್ರೆಸ್ ಗೆ ಸೇರಿದ ವ್ಯಕ್ತಿಯೇ ಹೊರದು ಬಿಜೆಪಿಗೆ ಸೇರಿದವರಲ್ಲ. ಶಾಸಕನ ಮನೆ ಮೇಲೆ ದಾಳಿ ಮಾಡಿದ್ದ ಗಲಭೆಕೋರರ ಮನೆಗೆ ಶಾಸಕ ಜಮೀರ್ ಅಹ್ಮದ್ ಅವರು ಭೇಟಿ ನೀಡಿದ್ದಾರೆ. ಅವರೇನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೇ? ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT