ರಾಜಕೀಯ

ದೆಹಲಿಯಲ್ಲಿ ಜಾರಕಿಹೊಳಿ: ಬಿ.ಎಲ್.ಸಂತೋಷ್, ಜೆಪಿ ನಡ್ಡಾ ಭೇಟಿ, ಮಾತುಕತೆ

Manjula VN

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು, ಸೋಮವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿಯವರನ್ನು ಭೇಟಿ ಮಾಡಿದ್ದು, ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದರೆಂದು ತಿಳಿದುಬಂದಿದೆ. 

ಇಂದೂ ಕೂಡ ದೆಹಲಿಯಲ್ಲಿಯೇ ಇರಲಿರುವ ಜಾರಕಿಹೊಳಿಯವರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. 

ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿಯವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿದ್ದಾರೆ. ಪಕ್ಷದ ಸಂಘಟನೆಯ ಜೊತೆಗೆ ನೀರು ಪೋಲಾಗುವುದನ್ನು ತಡೆಯುವ, ವ್ಯರ್ಥವಾಗಿ ಹರಿಯುವ ನೀರನ್ನು ದ್ಬಳಕೆ ಮಾಡುವಂತ ಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ರೂಪಿಸುವಂತೆ ನಾಯಕರಿಗೆ ಮನವಿ ಮಾಡಲಾಗಿದೆೆಂದು ಹೇಳಿದ್ದಾರೆ. 

ಜಾರಕಿಹೊಳಿಯವರೊಂದಿಗೆ ಸಚಿವಕಾಂಕ್ಷಿಯಾಗಿರುವ ಸಿ.ಪಿ ಯೋಗೇಶ್ವರ್ ಅವರೂ ಕೂಡ ದೆಹಲಿ ಸುತ್ತುತ್ತಿದ್ದಾರೆ. ಎಂಎಲ್ಸಿಯಾಗಿ ಮಾಡಿದ್ದಕ್ಕೆ ಕೇಂದ್ರೀಯ ನಾಯಕರಿಗೆ ಕೃತಜ್ಞತೆ ಸಲ್ಲಿಸಲು ನಾನಿಲ್ಲಿಗೆ ಬಂದಿದ್ದೇನೆಂದು ಯೋಗೇಶ್ವರ್ ಅವರು ಹೇಳಿದ್ದಾರೆ. 

ಇನ್ನು ಯೋಗೇಶ್ವರನ್ನು ಅವರಿಗೆ ಸಚಿವ ಸ್ಥಾನ ನೀಡಿ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಸ್ವಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT