ರಾಜಕೀಯ

ಟೆಲಿಫೋನ್ ಟ್ಯಾಪಿಂಗ್ ಅನುಭವ ಕಾಂಗ್ರೆಸ್ಸಿಗಿದೆ- ಬಸವರಾಜ್ ಬೊಮ್ಮಾಯಿ

Nagaraja AB

ಬೆಂಗಳೂರು: ಟೆಲಿಫೋನ್ ಟ್ಯಾಪಿಂಗ್ ಅನುಭವ ಕಾಂಗ್ರೆಸ್ಸಿಗೆ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟೆಲಿಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಮಾಡಿದ ಹಿನ್ನೆಲೆಯಲ್ಲಿ ಗೃಹಸಚಿವರು, ನಮ್ಮದು ಒಂದು ಜವಾಬ್ದಾರಿಯುತ ಸರ್ಕಾರವಾಗಿದ್ದು‌ ಟೆಲಿಫೋನ್ ಕದ್ದಾಲಿಕೆ ಮಾಡುವ ಕೆಳಮಟ್ಟಕ್ಕೆ ಹೋಗುವುದಿಲ್ಲ. ಅದು ನಮಗೆ ಅವಶ್ಯಕತೆಯು ಇಲ್ಲ. ಡಿ.ಕೆ. ಶಿವಕುಮಾರ್ ಅವರ ಟೆಲಿಫೋನ್ ಕದ್ದಾಲಿಕೆಯ ಪ್ರಶ್ನೆಯೇ ಇಲ್ಲ. 
ಅವರ ನಾಯಕರು ಅವರಿಗೆ ಕಾಲ್ ಮಾಡಿದಾಗ ಮಾತನಾಡಲು ಸಾಧ್ಯವಾಗಿಲ್ಲ ಅಂದರೆ ಟೆಲಿಫೋನ್ ಕಂಪನಿಯನ್ನು ವಿಚಾರಿಸಬೇಕು. ಅದನ್ನು ಟೆಲಿಫೋನ್ ಟ್ಯಾಪಿಂಗ್ ಎಂದು ಆರೋಪ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಈಗಾಗಲೇ ಅವರು ಭಾಗಿಯಾಗಿದ್ದ ಸರ್ಕಾರ ಟೆಲಿಫೋನ್ ಟ್ಯಾಪಿಂಗ್ ಮಾಡಿದ್ದನ್ನು ಸಿಬಿಐ ವಿಚಾರಣೆ ಮಾಡುತ್ತಿದೆ. ಟೆಲಿಫೋನ್ ಟ್ಯಾಪಿಂಗ್ ಅನುಭವ ಅವರ ಸರ್ಕಾರಕ್ಕೆ ಇದೆ.ನಮ್ಮ ಸರ್ಕಾರವು ಡಿ. ಕೆ. ಶಿವಕುಮಾರ್ ಅವರ ಚಟುವಟಿಕೆಗಳ ಬಗ್ಗೆ ತೆಲೆಕೆಡಿಸಿಕೊಂಡಿಲ್ಲ ಹಾಗೂ ಇದು ನಮಗೆ ಅವಶ್ಯಕತೆಯು ಇಲ್ಲ. ಅವರು ತನಿಖೆಯಲ್ಲಿ ನಮ್ಮ ಸರ್ಕಾರದ ಹಸ್ತಕ್ಷೇಪ ಮಾಡಿರುವ 
ಆರೋಪವು ನಿರಾಧಾರ ಹಾಗೂ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

SCROLL FOR NEXT