ರಾಜಕೀಯ

ಎಪಿಎಂಸಿ ಕಾಯ್ದೆಗೆ ಬೆಂಬಲ: ಜೆಡಿಎಸ್ ನಾಯಕರ ವಿರುದ್ಧ ದತ್ತ ಅಸಮಾಧಾನ

Shilpa D

ಶಿವಮೊಗ್ಗ: ಯಾವುದೇ ಪಕ್ಷಕ್ಕಾದರೂ ಒಂದು ಸ್ಪಷ್ಟ ನಿಲುವಿರಬೇಕು, ಇಲ್ಲದೇ ಇದ್ದರೇ ನಗೆ ಪಾಟಲಿಗೀಡಾಬೇಕಾಗುತ್ತದೆ, ಆಗ ಪಕ್ಷ ಪಕ್ಷ ದುರ್ಬಲವಾಗುತ್ತದೆ ಎಂದು ಜೆಡಿಎಸ್ ನಾಯಕ ವೈಎಸ್ ವಿ ದತ್ತ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ಗೋಹತ್ಯೆ, ಕಾಯ್ದೆ, ವಿಷಯದಲ್ಲಿ ಜೆಡಿಎಸ್ ತೆಗೆದುಕೊಂಡ ನಿರ್ಧಾರ ಸರಿಯಲ್ಲ ಎಂದು ಟೀಕಿಸಿದ್ದಾರೆ.

ಜೆಡಿಎಸ್‌ ಜಾತ್ಯತೀತ ಪಕ್ಷವಾಗಿದ್ದು, ತತ್ವ- ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಜೆಡಿಎಸ್‌ ರೈತರ ಪರ, ಬಡವರ ಪರವಾಗಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಈಗಾಗಲೇ ಇದರ ಬಗ್ಗೆ ವಿಲೀನ ಇಲ್ಲ ಎಂದು ಹೇಳಿದ್ದಾರೆ. ಜೆಡಿಎಸ್‌ನ್ನು ಯಾವುದೇ ಕಾರಣಕ್ಕೂ ಬಿಜೆಪಿಯಲ್ಲಿ ವಿಲೀನಗೊಳಿಸುವುದಿಲ್ಲ ಪುನರುಚ್ಚರಿಸಿದ್ದಾರೆ.

ಜಾತಿ, ಸಮುದಾಯ, ಹಣ ರಾಜಕಾರಣದಲ್ಲಿ ಬೆರೆಯುತ್ತಿದೆ. ಹಾಗಾಗಿ ನಮಗೆ ವಿಧಾನ ಪರಿಷತ್‌ ಸ್ಥಾನ ಕೈ ತಪ್ಪಲು ಕಾರಣ ಇರಬಹುದು. ಜತೆಗೆ ಇದು ಪಕ್ಷದ ತೀರ್ಮಾನ. ಅಲ್ಲಿ ಇಕ್ಕಟ್ಟು, ಬಿಕ್ಕಟ್ಟು ಇರುತ್ತದೆ. ಅದರಿಂದ ನನಗೇನು ಬೇಜಾರಿಲ್ಲ ಎಂದರು.

SCROLL FOR NEXT