ರಾಜಕೀಯ

ಬಾಗಲಕೋಟೆ: ಮತಕ್ಕಾಗಿ ವಲಸಿಗರಿಗೆ ಗಾಳ; ದೂರದೂರಿಂದ ಗ್ರಾಮಗಳಿಗೆ ಕರೆತಂದ ಅಭ್ಯರ್ಥಿಗಳು

Shilpa D

ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ, ಬಾದಾಮಿ, ಹುನಾಗುಂದ ಮತ್ತು ಗುಳೇದಗುಡ್ಡದ ಬಸ್ ನಿಲ್ದಾಣಗಳು ಸಾವಿರಾರು ವಲಸಿಗರಿಂದ ತುಂಬಿದ್ದವು.

ಅವರೆಲ್ಲಾ ತಮ್ಮ ಮನೆಗಳಿಗೆ ವಾಪಸಾಗಿದ್ದದ್ದು ತುಂಬಾ ವಿಶೇಷ ಕಾರಣಕ್ಕೆ, ಏಕೆಂದರೆ ಭಾನುವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಅತ್ಯಮೂಲ್ಯವಾದ ಮತ ಚಲಾಯಿಸಲು ಬಸ್ ಗಳ ಮೂಲಕ ಸ್ವಗ್ರಾಮಕ್ಕೆ ಆಗಮಿಸಿದ್ದರು.

ತಮ್ಮ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದ ಅಭ್ಯರ್ಥಿಗಳು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿವ ವಲಸಿಗ ಮತದಾರರನ್ನು, ದೂರದ ಬೆಂಗಳೂರು, ಮಂಗಳೂರು, ಮತ್ತು ಮಹಾರಾಷ್ಟ್ರ ಹಾಗೂ ಗೋವಾದಿಂದ ಕರೆತಂದಿದ್ದರು.

ತಳ ಮಟ್ಟದ ಗ್ರಾಮ ಪಂಚಾಯಿತಿ ಚುನಾವಣೆಗಳು ಎಷ್ಟೊಂದು ಮಹತ್ವ ಪಡೆದಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮತ ಗಟ್ಟೆಗಳಿಗೆ ತೆರಳುವ ವಲಸಿಗ ಮತದಾರರಿಗಾಗಿ ಕೆಲವು ಅಭ್ಯರ್ಥಿಗಳು ತಾಲೂಕು ಬಸ್ ನಿಲ್ದಾಣದಿಂದ ಟ್ಯಾಕ್ಸಿ ವ್ಯವಸ್ಥೆ ಮಾಡಿದ್ದರು. 

ಮಂಗಳೂರು ಬಂದರಿನಲ್ಲಿ ಕೆಲಸ ಮಾಡುವ ಗುಳೇದಗುಡ್ಡದ ಸುಭಾಷ್ ಎಂಬಾತ, ಒಬ್ಬ ಅಭ್ಯರ್ಥಿ ನಮ್ಮ ಜೊತೆ ಮಾತನಾಡಿ ನಾವು ಬರಲು ಐಷರಾಮಿ  ಹವಾ ನಿಯಂತ್ರಿತ ಬಸ್ ವ್ಯವಸ್ಥೆ ಮಾಡಿದ್ದರು, ನಾವು ಒಂದೇ ಗ್ರಾಮದ 60 ಮಂದಿ ಮಂಗಳೂರಿನಿಂದ ಬಂದು ಮತ ಚಲಾಯಿಸಿದೆವು ಎಂದು ಹೇಳಿದ್ದಾರೆ.

ಇನ್ನೂ ಬಾಗಲಕೋಟೆ ಮತ್ತು ಹುನಗುಂದ ತಾಲೂಕುಗಳ ಹಲವು ವಲಸಿಗ ಮತದಾರರು ಮತದಾನಕ್ಕೆ ಬರಲು ಸಾಧ್ಯವಾಗಲಿಲ್ಲ, ಇದರಿಂದ ಮತದಾನದ ಶೇಕಡವಾರು ಪ್ರಮಾಣದ ಮೇಲೆ ಪರಿಣಾಮ ಬೀರಲಿದೆ.

SCROLL FOR NEXT