ರಾಜಕೀಯ

ನಾಳೆ ಸಚಿವ ಸಂಪುಟ ವಿಸ್ತರಣೆ: ಯೋಗೇಶ್ವರ್ ಅನುಮಾನ, ಲಿಂಬಾವಳಿ, ಉಮೇಶ್ ಕತ್ತಿ ಖಚಿತ

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರುವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಹತ್ತು ಮತ್ತು ಮೂಲ ಬಿಜೆಪಿಯ ಇಬ್ಬರು ಅಥವಾ ಮೂವರು ಸಚಿವರಾಗಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಸೇರಿ ಹಲ ಪ್ರಮುಖರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ. ಸಿ.ಪಿ ಯೋಗೇಶ್ವರ್ ಸಂಪುಟಕ್ಕೆ ಸೇರುವ ವಿಚಾರ ಡೋಲಾಯಮಾನವಾಗಿದೆ. ಯೋಗೇಶ್ವರ್ ಸೇರ್ಪಡೆಗೆ ತೀವ್ರ ವಿರೋಧವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಅವರನ್ನು ಹೆಸರನ್ನು ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ನೂತನ ಸಚಿವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಸಂಭಾವ್ಯ ಸಚಿವರ ಪಟ್ಟಿ
ರಮೇಶ್‌ ಜಾರಕಿಹೊಳಿ
ಶ್ರೀಮಂತ್‌ ಪಾಟೀಲ್‌
ಶಿವರಾಮ್‌ ಹೆಬ್ಬಾರ್‌
ಬಿಸಿ ಪಾಟೀಲ್‌
ಆನಂದ್ ಸಿಂಗ್‌
ಬೈರತಿ ಬಸವರಾಜ್‌
ಎಸ್‌ಟಿ ಸೋಮಶೇಖರ್‌
ಗೋಪಾಲಯ್ಯ
ಡಾ. ಕೆ ಸುಧಾಕರ್‌
ನಾರಾಯಣಗೌಡ

ಮೂಲ ಬಿಜೆಪಿ ಶಾಸಕರು
ಉಮೇಶ್‌ ಕತ್ತಿ
ಅರವಿಂದ್‌ ಲಿಂಬಾವಳಿ

ಕೊನೆ ಕ್ಷಣದಲ್ಲಿ ಈ ಪಟ್ಟಿಯಲ್ಲಿ ಬದಲಾವಣೆಯಾದರೂ ಅಚ್ಚರಿ ಪಡಬೇಕಾಗಿಲ್ಲ.

SCROLL FOR NEXT