ರಾಜಕೀಯ

ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿ-ಬೆಂಗಳೂರಿಗೆ ಸಿಂಹಪಾಲು: ಒಕ್ಕಲಿಗರದ್ದೇ  ಮೇಲುಗೈ

Shilpa D

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಸಂಪುಟಕ್ಕೆ ಇಂದು 10 ಮಂದಿ ನೂತನ ಸಚಿವರು ಸೇರ್ಪಡೆಯಾಗುವುದರೊಂದಿಗೆ ಸಂಪುಟದ ಗಾತ್ರ 28ಕ್ಕೇರಿದ್ದು, ಒಕ್ಕಲಿಗರೇ ಮೇಲುಗೈ ಸಾಧಿಸಿದ್ದಾರೆ.

ಇಂದು ಪ್ರಮಾಣ ವಚನ ಸ್ವೀಕರಿಸಿದ 10 ಮಂದಿ ನೂತನ ಸಚಿವರ ಪೈಕಿ ನಾಲ್ವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರು ಲಿಂಗಾಯತ, ಓರ್ವ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 

ಶ್ರೀಮಂತ ಪಾಟೀಲ್ ಅವರು ಮರಾಠ, ಶಿವರಾಂ ಹೆಬ್ಬಾರ್ ಬ್ರಾಹ್ಮಣ, ಭೈರತಿ ಬಸವರಾಜ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಕೆ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್, ಕೆ.ನಾರಾಯಣ ಗೌಡ, ಕೆ.ಸುಧಾಕರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.

ಬೆಂಗಳೂರು ಮತ್ತು ಬೆಳಗಾವಿಗೆ ಅರ್ಧದಷ್ಟು  ಸ್ಥಾನ ದೊರಕಿದ್ದರೆ, ಇತರ ಜಿಲ್ಲೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮಧ್ಯ ಕರ್ನಾಟಕ, ಹಳೆಯ ಮೈಸೂರು, ಕರಾವಳಿ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

10 ಮಂದಿಯ ಪೈಕಿ 8 ಮಂದಿ ಮೊದಲ ಬಾರಿಗೆ ಸಚಿವರಾದವರಾಗಿದ್ದಾರೆ.  ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಈ ಹಿಂದೆಯೂ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಸಚಿವಾಕಾಂಕ್ಷಿಗಳಾಗಿದ್ದ ಮುರುಗೇಶ್ ನಿರಾಣಿ, ಯೋಗೇಶ್ವರ್, ಉಮೇಶ್ ಕತ್ತಿ ಸೇರಿದಂತೆ ಇತರರು ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಚಿವರಾದ ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು ಕೂಡ ಗೈರಾಗಿದ್ದರು.

SCROLL FOR NEXT