ರಾಜಕೀಯ

ಬಿಎಸ್ ವೈ ಸಂಪುಟದಲ್ಲಿ ಒಕ್ಕಲಿಗರ ಪಾರುಪತ್ಯ: ಹೆಚ್ಚಾಗುತ್ತಿದೆ ಬಿಜೆಪಿ ಪ್ರಾಬಲ್ಯ

Shilpa D

ಬೆಂಗಳೂರು:  ಒಕ್ಕಲಿಗ ಪ್ರಬಲ ಕ್ಷೇತ್ರಗಳಾದ ಮಂಡ್ಯ, ಯಶವಂತಪುರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಮೇಲೆ, ಯಡಿಯೂರಪ್ಪ ಸಂಪುಟದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ.

ನಾರಾಯಣಗೌಡ, ಕೆ.ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಹಾಗೂ ಕೆ. ಸುಧಾಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇದರ ಜೊತೆಗೆ ಆರ್. ಅಶೋಕ್, ಸಿಟಿ ರವಿ ಮತ್ತು ಸಿಎನ್ ಅಶ್ವತ್ಥನಾರಾಯಣ ಅವರಿಗೆ ಈಗಾಗಾಲೇ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಬಿವೈ ವಿಜಯೇಂದ್ರ ಮತ್ತು  ಅಶ್ವತ್ಥನಾರಾಯಣ ಸೇರಿ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಗೆಲ್ಲಲು ಕಾರಣರಾದರು, ಹಾಗಾಗಿ ಒಕ್ಕಲಿಗರಿಗೆ  ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದರು. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿದರೇ ಒಕ್ಕಲಿಗ ಪ್ರಾಬಲ್ಯವಿರುವ ರಾಮನಗರ ಮತ್ತು ಚನ್ನಪಟ್ಟಣ ಬೆಲ್ಟ್ ನಲ್ಲಿ ಬಿಜೆಪಿ ಮತ್ತಷ್ಚು ಪ್ರಾಬಲ್ಯಕ್ಕೆ ಸಹಾಯವಾಗುತ್ತಿತ್ತು ಎಂಬುದು ಯಡಿಯೂರಪ್ಪ ಲೆಕ್ಕಚಾರವಾಗಿತ್ತು.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರು,  ಒಕ್ಕಲಿಗರ ಪ್ರಾಬಲ್ಯವಿರುವ 37 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು.  28 ಸಂಸದೀಯ ಕ್ಷೇತ್ರಗಳಲ್ಲಿ 25 ಕ್ಷೇತ್ರ ಗೆದ್ದ ಯಡಿಯೂರಪ್ಪ ಅವರು ಹಾಸನ ಗೆಲ್ಲಲು ಸಾಧ್ಯವಾಗಲಿಲ್ಲ,  ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

ಒಕ್ಕಲಿಗ ಸಮುದಾಯದ ಮತಗಳನ್ನು ಹೆಚ್ಚಿಸುವ ಸಲುವಾಗಿ ಯಡಿಯೂರಪ್ಪ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದ್ದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸ್ಥಳೀಯ ಆರ್ಥಿಕತೆಯ ಬೆನ್ನೆಲುಬಾಗಿರುವ ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಗಳ ಬಗ್ಗೆ ಬಿಜೆಪಿ ತೀವ್ರ ಆಸಕ್ತಿ ವಹಿಸಿದೆ. ಇದೆಲ್ಲದರ ಜೊತೆಗೆ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ರಾಜ್ಯಕ್ಕ ಆಗಮಿಸಿದ ವೇಳೆಯಲ್ಲಿ  ಆದಿ ಚುಂಚನಗಿರಿ  ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದರು, ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ. 

SCROLL FOR NEXT