ರಾಜಕೀಯ

ಶಾ ಹಿಂದೂರಾಷ್ಟ್ರದ ಕನಸು ಕಾಣುತ್ತಿದ್ದಾರೆ, ಜಾತ್ಯಾತೀತ ಶಕ್ತಿಗಳು ಒಗ್ಗಟ್ಟಾಗಿ ಅದನ್ನು  ಮುರಿಯಬೇಕು: ದೇವೇಗೌಡ

Raghavendra Adiga

ಹಾಸನ: ಕೇಂದ್ರ ಗೃಹ ಸಚಿವ ಅಮಿತ್ ಶಾ "ಹಿಂದೂರಾಷ್ಟ್ರ"ದ ಕನಸು ಕಾಣುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಹಾಸನದಲ್ಲಿ ನಡೆದ ಸಿಎಎ / ಎನ್‌ಆರ್‌ಸಿ ವಿರೋಧಿ ರ್ಯಾಲಿಯಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ದೇವೇಗೌಡ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾರತವು ಜಾತ್ಯತೀತ, ಬಹುಭಾಷಾ ದೇಶ ಎಂಬುದನ್ನು ಗೃಹ ಸಚಿವರು ಮರೆತಿದ್ದಾರೆ.“ಷಾ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ. ರಾಷ್ಟ್ರದ ಶಾಂತಿ, ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಜನರು ಮುಂದೆ ಬಂದು ಕಾಯ್ದೆಗಳನ್ನು ವಿರೋಧಿಸಬೇಕು ”ಎಂದು ಮಾಜಿ ಪ್ರಧಾನಿ, ಹೇಳಿದ್ದಾರೆ. ಜಾತ್ಯತೀತ ಮುಖಂಡರು ಒಗ್ಗಟ್ಟಾಗಿ  ಕೇಂದ್ರವು ಮಂಡಿಸಿರುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಹೋರಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

"ಜಾತ್ಯತೀತ ಶಕ್ತಿಗಳುಬೀದಿಗಿಳಿಯುವ ಮೂಲಕ ಮಾತ್ರವೇ ಅಲ್ಪಸಂಖ್ಯಾತರನ್ನು ರಕ್ಷಿಸಬಹುದು" ಎಂದು ಅವರು ಹೇಳಿದರು. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗಳ ಸುತ್ತಲಿನ ವಿವಾದದ ಬಗ್ಗೆ ಮಾತನಾಡಿದ ಗೌಡ, ಬಿಜೆಪಿ ನಾಯಕರು ರಾಷ್ಟ್ರ ವಿರೋಧಿ ಟೀಕೆಗಳನ್ನು ಪ್ರಸಾರ ಮಾಡುತ್ತಿದ್ದಾರೆ, ಇದು ಶಾಂತಿಗೆ ಭಂಗ ತರುತ್ತದೆ. "ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಹಿಂದೂಗಳು ಬಿಜೆಪಿಯ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಹೋರಾಡಲು ಒಂದಾಗಬೇಕು."ಎಂದರು.

SCROLL FOR NEXT