ರಾಜಕೀಯ

ಆರ್ಥಿಕ ತೊಂದರೆ ಇರುವುದು ನಿಜ, ಸಿದ್ದರಾಮಯ್ಯ ಹೇಳುವಷ್ಟು ತೊಂದರೆ ಇಲ್ಲ: ಕಾರಜೋಳ

Manjula VN

ಬಾಗಲಕೋಟೆ: ರಾಜ್ಯದಲ್ಲಿ ಆರ್ಥಿಕ ತೊಂದರೆ ಇರುವುದು ನಿಜವಾಗಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವ ತೊಂದರೆ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದರಿದ್ರತನ ಆರಂಭಗೊcಡಿದ್ದೇ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಎಂದು ಆರೋಪಿಸಿದರು.

ಹೊಸ ಸಾಲ ತೆಗೆಯಲು ಬಾರದಷ್ಟು ಸಾಲ ತೆಗೆದಿದ್ದಾರೆ. ಪ್ರಕೃತಿ ವಿಕೋಪ ಉಂಟಾಗಿ ಆರ್ಥಿಕ ತೊಂದರೆ ಆಗಿದೆ. ಸುಮಾರು ೩೮ ಸಾವಿರ ಕೋಟಿ ರೂ. ನೆರೆ ಪರಿಹಾರಕ್ಕೆ ಖರ್ಚು ಮಾಡಲಾಗುತ್ತಿದೆ. ಪರಿಹಾರ ಹಂಚಿಕೆ, ರಸ್ತೆ, ಮನೆಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಹಾಗಾಗಿ ತೊಂದರೆ ಕಾಣಿಸಿಕೊಂಡಿದೆ ಎಂದರು.

ದೇಹಲಿ ವಿಧಾನಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು ಎಪಿಪಿ ನೀಡಿರುವ ಜನಪ್ರೀಯ ಯೋಜನೆಗಳು ಆ ಪಕ್ಷದ ಗೆಲುವಿಗೆ ಕಾರಣವಾಗಿದೆ. ದೇಶದ ವಿಷಯ ಬಂದಾಗ ದೇಶದ ಅಖಂಡತೆ, ರಾಷ್ಟಿçÃಯತೆ ವಿಷಯ ಬಂದಾಗ ಅದೇ ಜನ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಜನಪ್ರೀಯ ಯೋಜನೆಗಳು ಘೋಷಣೆ ಮಾಡಿರುವ ಪರಿಣಾಮ ಅವುಗಳ ಅಧಿಕಾರಕ್ಕೆ ಬರಲು ಸಹಾಯವಾಗುತ್ತಿದೆ ಎಂದು ಹೇಳಿದರು.

ಆಕ್ರಮ ಮರಳು ಗಣಿಗಾರಿಕೆ ಯಾರು ಮಾಡುತ್ತಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಲಾಗಿದೆ. ಜನತೆಗೆ ಮರಳು ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.

SCROLL FOR NEXT