ರಾಜಕೀಯ

ಕೇಜ್ರಿವಾಲ್ ಜನಪರ ಯೋಜನೆಗಳಿಂದ ಎಎಪಿ ಗೆಲುವು, ಕರ್ನಾಟಕ ಬಂದ್ ಗೆ ಬೆಂಬಲ: ಸಿದ್ದರಾಮಯ್ಯ

Shilpa D

ಬೆಂಗಳೂರು: ದೆಹಲಿಯಲ್ಲಿ ಎಎಪಿ ಗೆಲುವು ನಿರೀಕ್ಷಿತ,  ಅರವಿಂದ್ ಕೇಜ್ರಿವಾಲ್ ಅವರ ಜನಪರ ಯೋಜನೆ ಗಳಿಂದ ಎಎಪಿ ಮತ್ತೆ ಅಧಿಕಾರಕ್ಕೆ ಬಂದಿದೆ, ದೆಹಲಿಯಲ್ಲಿ ಯಾವುದೇ ರೀತಿಯ ಜಾತಿ ರಾಜಕಾರಣವಿಲ್ಲ ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್ ಇಲಾಖೆಗಳಲ್ಲಿ ಕೇಜ್ರಿವಾಲ್ ಮಾಡಿದ ಜನಪರ ಯೋಜನೆಗಳಿಂದಾಗಿ ದೆಹಲಿಯಲ್ಲಿ ಎಎಪಿ ಗೆಲುವು ಸಾಧಿಸಿದೆ.

ಸಿಎಂ ಯಡಿಯೂರಪ್ಪ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯ ವನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಾರೆ, ಮೊದಲು ಅವರು ತಮ್ಮ ಕಚೇರಿಯನ್ನು ಭ್ರಷ್ಟಾಚಾರ ಮುಕ್ತ ಗೊಳಿಸಲಿ ಎಂದು ಹೇಳಿದ್ದಾರೆ.

ಇನ್ನೂ ಕೆಪಿಸಿಸಿ ಅಧ್ಯಕ್ಷ ನೇಮಕ ಸಂಬಂಧ ಮಾನಾಡಿದ ಅವರು, ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಾಗುತ್ತದೆ, ಯಾರೇ ಅಧ್ಯಕ್ಷರಾದರೂ ನನಗೆ ಸಂತಸ ಎಂದು ಹೇಳಿದ್ದಾರೆ.

ಇನ್ನೂ ಫೆಬ್ರವರಿ 13 ರಂದು ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಕಾಂಗ್ರೆಸ್ ನೈತಿಕ ಬೆಂಬಲ ನೀಡುತ್ತದೆ ಆದರೆ ಬಂದ್ ನಲ್ಲಾ ಪಾಲ್ಗೋಳ್ಳುವುದಿಲ್ಲ ಎಂದು ತಿಳಿಸಿದರು.

ಸಿಎಂ ಯಡಿಯೂರಪ್ಪ ಅವರ ಖಾತೆ ಹಂಚಿಕೆ ಸಂಬಂಧ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ, ಅವರಿಗೆ ಖಾತೆ ಹಂಚಿಕೆ ಮಾಡುವ ಸ್ವಾತಂತ್ರ್ಯವೂ ಇಲ್ಲ ಎಂದು ಹೇಳಿದ್ದಾರೆ. 

SCROLL FOR NEXT