ರಾಜಕೀಯ

ಜಲ ವಿವಾದದಲ್ಲಿ ಕಾನೂನು ಹೋರಾಟಕ್ಕೆ ಆದ್ಯತೆ: ಸಚಿವ ರಮೇಶ್ ಜಾರಕಿಹೊಳಿ

Vishwanath S

ಬೆಂಗಳೂರು: ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದು ತಮ್ಮ ಗುರಿಯಾಗಿದ್ದು, ಸವೋಚ್ಚ ನ್ಯಾಯಾಲಯದಲ್ಲಿರುವ ನೀರು ಹಂಚಿಕೆ ಪ್ರಕರಣಗಳಲ್ಲಿ ಪರಿಣಾಮಕಾರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದ ಮೂರನೇ ಮಹಡಿಯ 342 ಕೊಠಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜನತೆ ಮತ್ತು ರಾಜ್ಯದ ಭೂಮಿಗೆ ನೀರುಣಿಸುವುದು. ಜನರ ಕಣ್ಣೀರ ಒರೆಸುವುದು ಎರಡೂ ನನ್ನ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಭಾವಿಸಿದ್ದೇನೆ. ಇದಕ್ಕಾಗಿ ಜನರ ಸಹಕಾರ ಅಗತ್ಯ ಎಂದರು.

ರಾಜ್ಯದ ಹಲವು ಜ್ವಲಂತ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರಾಜ್ಯದ ಕಾವೇರಿ, ಕೃಷ್ಣಾ, ಮಹದಾಯಿ ಸೇರಿದಂತೆ ಎಲ್ಲಾ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸಿ, ಜನತೆಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಅನುಕೂಲವಾಗುವಂತೆ ಕರ್ತವ್ಯ ನಿಭಾಯಿಸುವುದಾಗಿ ಹೇಳಿದರು.

SCROLL FOR NEXT