ರಾಜಕೀಯ

ಕುತೂಹಲ ಕೆರಳಿಸಿದ ಜಗದೀಶ್ ಶೆಟ್ಟರ್ ಮನೆಯ ಅತೃಪ್ತರ ಸಭೆ

Manjula VN

ಬೆಂಗಳೂರು: ಸಚಿವ ಸ್ಥಾನ ಸಿಗದಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿಯ ಕೆಲ ಅತೃಪ್ತ ಶಾಸಕರು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಸಿದೆ. 

ಈ ಕುರಿತು ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಸಭೆ ಕುರಿತು ಮಾಹಿತಿ ನೀಡಲು ಯಡಿಯೂರಪ್ಪ ಅವರ ನಿವಾಸಕ್ಕೆ ಸ್ವತಃ ಜಗದೀಶ್ ಶೆಟ್ಟರ್ ಅವರೇ ಭೇಟಿ ನೀಡಿ, ವಿವರಣೆ ನೀಡಿದ್ದಾರೆ. 

ಶೆಟ್ಟರ್ ಮನೆಯಲ್ಲಿ ನಡೆದ ಸಭೆಯಲ್ಲಿ ಮುರುಗೇಶ್ ನಿರಾಣಿ, ಉಪ ಮುಖ್ಯಮಂತ್ರಿ ಸಿಎನ್ ಅಶ್ವತ್ಥ್ ನಾರಾಟಣ್ ಹಾಗೂ ಪಕ್ಷದ ವಕ್ತಾರ ಗೋ ಮಧುಸೂದನ್ ಅವರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. 

ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರಾಣಿ, ಅತೃಪ್ತತೆಯ ಪ್ರಶ್ನೆಯೇ ಬರುವುದಿಲ್ಲ. ಕಳೆದ 30 ವರ್ಷಗಳಿಂದ ಯಡಿಯೂರಪ್ಪ ಅವರಿಗೆ ಆಪ್ತನಾಗಿದ್ದೇನೆ. ಶೆಟ್ಟರ್ ಮನೆಗೆ ಹೋಗಿದ್ದು ನಿಜ. ಆದರೆ, ಪಕ್ಷದ 20 ಶಾಸಕರು ಸಭೆಯಲ್ಲಿ ಹಾಜರಿದ್ದರು ಎಂಬ ಸುದ್ಧಿ ಸುಳ್ಳು. ಶೆಟ್ಟರ್ ಮನೆಯಲ್ಲಿ ಯಾವುದೇ ಔತಣಕೂಟಗಳೂ ಇರಲಿಲ್ಲ. ಕೈಗಾರಿಕೆಗೆ ಸಂಬಂಧಪಟ್ಟ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೆವು. ಶೆಟ್ಟರ್ ಜೊತೆಗೆ 10 ನಿಮಿಷಗಳ ಕಾಲ ಮಾತುಕತೆ ನಡೆಸಿರಬಹುದಷ್ಟೇ ಎಂದು ಹೇಳಿದ್ದಾರೆ. 

ಅಶ್ವತ್ಥ್ ನಾರಾಯಣ್ ಮಾತನಾಡಿ, ಭಿನ್ನಾಭಿಪ್ರಾಯಕ್ಕೆ ಪಕ್ಷದಲ್ಲಿ ಜಾಗವಿಲ್ಲ ಎಂದಿದ್ದಾರೆ. ಇದರಂತೆ ಮಧುಸೂತದನ್ ಹಾಗೂ ಉಮೇಶ್ ಕತ್ತಿ ಕೂಡ ಆರೋಪಗಳನ್ನು ನಿರಾಕರಿಸಿದ್ದಾರೆ. 

SCROLL FOR NEXT