ರಾಜಕೀಯ

ಸದನಕ್ಕೆ ಸಚಿವರು, ಶಾಸಕರು ಗೈರು:  ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

Shilpa D

ಬೆಂಗಳೂರು: ಶಾಸಕರು ಹಾಗೂ ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮ ಯ್ಯ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ  ನಡೆಯಿತು.

ಸದನ ಆರಂಭವಾಗುತ್ತಿದ್ದಂತೆ ಬೆರಳಣಿಕೆ ಯಷ್ಟು ಶಾಸಕರಷ್ಟೇ ಹಾಜರಿದ್ದರು.ಸಚಿವರ ಹಾಜರಿ ಕೂಡ ಅತ್ಯಂತ ವಿರಳವಾಗಿತ್ತು.ಈ ವೇಳೆ ಕಾಂಗ್ರೆಸ್‍ನ ಶಾಸಕರಾದ ಪಿ.ಟಿ. ಪರಮೇಶ್ವರ್ ನಾಯಕ್ ಮತ್ತು ಜಮೀರ್ ಅಹಮದ್ ಖಾನ್ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.

ಸದನ ಆರಂಭವಾಗಿ ನಿಯಮ 69 ರಡಿಯಲ್ಲಿ ಮಂಗಳೂರು ಗೋಲಿಬಾರ್‌ ವಿಚಾರವಾಗಿ ಚರ್ಚೆ ಆರಂಭವಾದರೂ ಸಚಿವರು ಹಾಜರಿರಲಿಲ್ಲ. ಕೆ.ಎಸ್ ಈಶ್ವರಪ್ಪ ಹಾಗೂ ಡಾ. ಕೆ ಸುಧಾಕರ್ ಮಾತ್ರ ಸದನದಲ್ಲಿದ್ದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, “ಸಚಿವರೇ ಇಲ್ಲದಿದ್ದಾಗ ನಾನೇನು ಮಾತನಾಡಲಿ” ಎಂದು ಆಕ್ಷೇಪ ವ್ಯಪ್ತಡಿಸಿದರು.

ಸಿದ್ದರಾಮಯ್ಯ ಆಕ್ಷೇಪಕ್ಕೆ ಉತ್ತರಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಕೆಲವು ಸಚಿವರು ಕಚೇರಿ ಪೂಜೆಯಲ್ಲಿದ್ದಾರೆ. ಈ ಕಾರಣಕ್ಕಾಗಿ ಗೈರಾಗಿದ್ದಾರೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಶಿಸ್ತು ಪಾಲನೆ ಅಗತ್ಯ, ಸಚಿವರು ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತಾಗಿ ಚರ್ಚೆ ನಡೆಯುತ್ತಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳೂರು ಪೊಲೀಸರು ಹಾಗೂ ಸರ್ಕಾರದ ನಡೆಯನ್ನು ಖಂಡಿಸಿದರು.

SCROLL FOR NEXT