ರಾಜಕೀಯ

ನೋಟುಗಳ ಅಮಾನ್ಯದಿಂದ ಭ್ರಷ್ಟಾಚಾರ ಇಳಿಮುಖ: ಡಿ.ವಿ.ಸದಾನಂದ ಗೌಡ

Shilpa D

ಬೆಂಗಳೂರು: ನೋಟು ಅಮಾನ್ಯದ ಬಳಿಕ ದೇಶದಲ್ಲಿ ಭ್ರಷ್ಟಾಚಾರ ತಗ್ಗಿದ್ದು ಅರ್ಥವ್ಯವಸ್ಥೆಗೆ ಹೊಸ ಆಯಾಮ ದೊರೆತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ ಸದಾನಂದ ಗೌಡ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ  ಅವರು ಭಾರತದ ಅರ್ಥವ್ಯವಸ್ಥೆ ಇಂದು ಜಗತ್ತಿನಲ್ಲೇ ಐದನೇ ಸ್ಥಾನದಲ್ಲಿದೆ. 

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುತ್ತಿದೆ. ಇತ್ತೀಚಿಗೆ ವಿಶ್ವ ಬ್ಯಾಂಕ್ ಬಿಡುಗಡೆಗೊಳಿಸಿರುವ ವರದಿ ಅನ್ವಯ ಭಾರತದ ಸರಳ ವಹಿವಾಟು ಸೂಚ್ಯಂಕ 147 ರಿಂದ 69ಕ್ಕೆ ಜಿಗಿದಿರುವುದು ಉತ್ತಮ ವಿಚಾರವಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಎದುರಾಗಿರುವ ಬಿಕ್ಕಟ್ಟುಗಳಿಂದ ಜಿಡಿಪಿ ಕುಸಿತ ಕಂಡಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ. ಜಿಎಸ್‍ಟಿ ಜಾರಿ ಬಳಿಕ ವ್ಯಾಪಾರಿಗಳಿಗೆ ಅನುಕೂಲವಾಗಿದ್ದು, ತೆರಿಗೆ ಸಂಗ್ರಹಣೆ ಸುಧಾರಣೆಯಾಗುತ್ತಿದೆ. ನೋಟು ರದ್ದತಿ ಬಳಿಕ ದೇಶದಲ್ಲಿ ಕಪ್ಪು ಹಣ ನಿಯಂತ್ರಣಕ್ಕೆ ಬಂದು, ಭ್ರಷ್ಟಾಚಾರವೂ ಕಡಿಮೆಯಾಗಿದೆ’ ಎಂದು ವಿವರಿಸಿದರು.

SCROLL FOR NEXT