ರಾಜಕೀಯ

ಬಿಬಿಎಂಪಿ ಚುನಾವಣೆಯಲ್ಲಿ ಎಎಪಿ 100 ಸೀಟು ಗೆದ್ದೇ ಗೆಲ್ಲುತ್ತದೆ:  ಪೃಥ್ವಿ ರೆಡ್ಡಿ

Shilpa D

ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 100 ಸೀಟುಗಳನ್ನು ಗೆಲ್ಲಲಿದೆ ಎಂದು ರಾಜ್ಯ ಎಎಪಿ ಸಂಚಾಲಕ ಪೃಥ್ವಿ ರೆಡ್ಡಿ  ಹೇಳಿದ್ದಾರೆ.

2011-12ರಲ್ಲಿ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿಎಎಪಿ ಒಂದು ಲಕ್ಷಕ್ಕೂ ಹೆಚ್ಚು ಕೇಡರ್ ಹೊಂದಿತ್ತು, ತೇಜಸ್ವಿ ಸೂರ್ಯ ಎಎಪಿಯಿಂದ ಬಿಜೆಪಿಗೆ ಹೋಗಿ ಸಂಸದರಾದರು.  ತನ್ವೀರ್ ಅಹ್ಮದ್ ಜೆಡಿಎಸ್  ರಾಷ್ಟ್ರೀಯ ವಕ್ತಾರರಾದಾರು,  ಎಎಪಿ  ಅಧಿಕಾರಕ್ಕೆ ಬಂದರೇ  ಸಿಎಂ ಆಗಬೇಕೆಂದು ರವಿ ಕೃಷ್ಣಾ ರೆಡ್ಡಿ ಕಾಯುತ್ತಿದ್ದಾರೆ. ಹೀಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಸ್ಥಾಪಿಸಿಕೊಂಡಿದ್ದಾರೆ. ಈಗ ಸದ್ಯ 25,000 ಕ್ಕೆ ಇಳಿದಿವೆ.

2015 ಮತ್ತು 2013 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಲಿಲ್ಲ,  ಆದರೆ ದೆಹಲಿಯ ಜನ ಎಎಪಿಗೆ ನೀಡಿರುವ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

“ಪ್ರತಿ ವರ್ಷ ಶಾಲಾ ಶುಲ್ಕಕ್ಕಾಗಿ ಸರಾಸರಿ ವ್ಯಕ್ತಿಯು 20,000 ರಿಂದ 30,000 ರೂ. ಖರ್ಚು ಮಾಡುತ್ತಾರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅದನ್ನು ಉಳಿಸಬಹುದು ಎಂದು ಹೇಳಿದ್ದಾರೆ.

ನಾವು ಉಚಿತ ಆರೋಗ್ಯ ವಿಮೆಯನ್ನು ಸಹ ಭರವಸೆ ನೀಡುತ್ತೇವೆ,  ಈಗಾಗಲೇ ದೆಹಲಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಮತ್ತು ನಾವು ಅದನ್ನು ಬೆಂಗಳೂರಿನಲ್ಲಿ  ಜಾರಿ ಮಾಡುತ್ತೇವೆ, ದೆಹಲಿಯ ಸರ್ಕಾರಿ ಶಾಲೆಗೆ ಮೆಲಾನಿಯಾ ಟ್ರಂಪ್ ಮಂಗಳವಾರ ಭೇಟಿ ನೀಡಿದ್ದಾರೆ, ಇವೆಲ್ಲಾ ಎಎಪಿ ಸರ್ಕಾರ ನಡೆಸುತ್ತಿರುವ ಶಾಲಗಳು, ಕೇಂದ್ರ ಸರ್ಕಾರದ ಒಂದೂ ಶಾಲೆಯೂ ಇಲ್ಲ ಎಂದು ಹೇಳಿದ್ದಾರೆ. 

SCROLL FOR NEXT