ರಾಜಕೀಯ

ದೇಶ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿ: ಯತ್ನಾಳ್

Lingaraj Badiger

ಶಿವಮೊಗ್ಗ: ಹುಬ್ಬಳಿ-ಬೆಂಗಳೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶ ವಿರೋಧಿಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡದೆ ನನ್ನ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದರು.
  
ಹೆಚ್​.ಎಸ್ ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಲ್ಲದೆ ಯತ್ನಾಳ್ ವಿರುದ್ಧ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ಅವರು, ದೇಶವಿರೋಧಿ ಪಾಕಿಸ್ಥಾನದ ಬಗ್ಗೆ ಹೇಳಿಕೆ ಕೊಟ್ಟ ಹೆಣ್ಣುಮಕ್ಕಳ ಬಗ್ಗೆ ಕಾಂಗ್ರೆಸ್​ ನಾಯಕರು ಮಾತನಾಡಲ್ಲ. ಬೇಕಿದ್ದರೇ ಕಾಂಗ್ರೆಸ್ ನಾಯಕರು ದೇಶದ ವಿರುದ್ಧ ಮಾತಾನಾಡುವವರ ವಿರುದ್ಧ ಹೋರಾಟ ಮಾಡಲಿ. ನನ್ನ ವಿರುದ್ದ ಹೋರಾಟ ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದು ತಿರುಗೇಟು ನೀಡಿದರು.
  
ವೀರ ಸಾರ್ವಕರ್ ಅಂತವರ ಬಗ್ಗೆ ಹಗುರವಾಗಿ ಕಾಂಗ್ರೆಸ್​ ನಾಯಕರು ಮಾತನಾಡಿದ್ದಾರೆ. ಮೊದಲು ಈ ಬಗ್ಗೆ ಅವರು ಜನರ ಬಳಿ ಕ್ಷಮೆ ಕೇಳಲಿ. ಸಂವಿಧಾನ ಬದ್ಧವಾಗಿ ಪೌರತ್ವ ತಿದ್ದುಪಡಿ(ಸಿಎಎ)ವು ಪಾರ್ಲಿಮೆಂಟ್ ನಲ್ಲಿ ಅನುಮೋದನೆಗೊಂಡಿದೆ. ಆದರೆ,ಕಾಂಗ್ರೆಸ್​ ಪಕ್ಷದವರು ವಿರೋಧಿಸುವ ಮೂಲಕ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬೆಲೆ ಕೊಡುತ್ತಿಲ್ಲ. ಕಾಂಗ್ರೆಸ್​ ನಾಯಕರು ಬೌದ್ಧಿಕವಾಗಿ ಈಗ ದಿವಾಳಿಯಾಗಿದ್ದಾರೆ. ಅವರಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಅಧಿವೇಶನ ನಡೆಯಲು ಬಿಡಲ್ಲ ಎಂದು ಹೇಳುತ್ತಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಅವರು ಎಲ್ಲಿ ಒಳ್ಳೆಯ ಬಜೆಟ್ ಕೊಟ್ಟರೇ, ನಮ್ಮ ಅಸ್ತಿತ್ವ ಹೋಗುತ್ತದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್​ಗೆ ಇದೆ. ಹೀಗಾಗಿ ತಡೆಹಿಡಿಯುವ ಪ್ರಯತ್ನ ಮಾಡಲು ಹೊರಟ್ಟಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು.

SCROLL FOR NEXT