ರಾಜಕೀಯ

ನಾನು ಯಾವುದೇ ಸ್ಥಾನಕ್ಕೆ ಆಕಾಂಕ್ಷಿಯಲ್ಲ- ಡಿಕೆ ಶಿವಕುಮಾರ್ 

Nagaraja AB

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಇಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುಧೀರ್ಘ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಇಂದು ಬೆಳಗ್ಗೆ ಬೇಟಿ ನೀಡಿದ್ದ ಡಿಕೆ ಶಿವಕುಮಾರ್ , ಸಿದ್ದರಾಮಯ್ಯ ಅವರೊಂದಿಗೆ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. 

ಸಿದ್ದರಾಮಯ್ಯ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಯಾವುದೇ ಸ್ಥಾನಕ್ಕಾಗಿ ಪೈಪೋಟಿಗಿಳಿದಿಲ್ಲ.ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ.ಎಷ್ಟು ಪ್ರೀತಿ ಕೊಡಬೇಕೋ ಅಷ್ಟು ‌ಪ್ರೀತಿ ಕೊಟ್ಟಿದೆ.ಸಿದ್ದರಾಮಯ್ಯ ನಮ್ಮ ಶಾಸಕಾಂಗದ  ನಾಯಕರು ಹೀಗಾಗಿ ಅವರ ಮನೆ ಬಂದಿದ್ದೇನೆ ಎಂದು  ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ.ಸಿದ್ದರಾಮಯ್ಯ ಅವರು ವಿಧಾನ ಸಭೆಯಲ್ಲಿ ವಿಪಕ್ಷ ನಾಯಕರು ಹಾಗೂ ಪಕ್ಷದ ಶಾಸಕಾಂಗದ ನಾಯಕರೂ ಆಗಿದ್ದಾರೆ.ಅವರ ಕೈ ಕೆಳಗೆ ತಾವು ಕೆಲಸ ಮಾಡಿದ್ದೇನೆ.ಹೀಗಾಗಿ ಅವರನ್ನು ಭೇಟಿ ಮಾಡಿಚೆರ್ಚೆ ನಡೆಸಿದ್ದೇನೆ.ಅವರ ಭೇಟಿಯಲ್ಲಿ ನನಗೆ ಏನು ವಿಶೇಷ ಇಲ್ಲ. ಈ ಭೇಟಿಗೆ ಯಾವುದೇ ವಿಶೇಷ ಉದ್ದೇಶವಿಲ್ಲ. ನಾನು ಒಬ್ಬರ ಕೆಳಗೆ ಕೆಲಸ ಮಾಡಿದರೆ ನಿಷ್ಠೆಯಿಂದ ಮಾಡುತ್ತೇನೆ ಎಂದು ಹೇಳಿದರು

SCROLL FOR NEXT