ರಾಜಕೀಯ

ಅಸುರಕ್ಷತೆಯಿಂದ ಯಾವೊಬ್ಬ ಅಲ್ಪಸಂಖ್ಯಾತರು ಭಾರತದಿಂದ ವಲಸೆ ಹೋಗಿಲ್ಲ- ಅಶ್ವಥ್ ನಾರಾಯಣ್

Nagaraja AB

ಬೆಂಗಳೂರು: ಅಸುರಕ್ಷತೆಯಿಂದ ಯಾವೊಬ್ಬ ಅಲ್ಪಸಂಖ್ಯಾತರು ಭಾರತದಿಂದ ವಲಸೆ ಹೋಗಿಲ್ಲ ಎಂದು ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಜನಜಾಗೃತಿ ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಭಾನುವಾರ ಬೆಂಗಳೂರಿನಲ್ಲಿ ಮನೆ-ಮನೆಗೆ ತೆರಳಿ ಜನರನ್ನು ಸಂಪರ್ಕಿಸಿದ ಅವರು, ಕಾಯ್ದೆ ಕುರಿತಂತೆ ಜನರಲ್ಲಿ ಬಿಂಬಿಸಲಾಗಿರುವ ತಪ್ಪು ಮಾಹಿತಿಯನ್ನು ದೂರ ಮಾಡುವುದಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾನವೀಯತೆಯ ಕಾಯ್ದೆಗೆ ಕಾಂಗ್ರೆಸ್ ಸೇರಿದಂತೆ ಕೆಲ ಶಕ್ತಿಗಳು ಕೋಮು ಬಣ್ಣ ಹಚ್ಚಲು ಯತ್ನಿಸುತ್ತಿರುವುದು ದುರದೃಷ್ಟಕರ ಎಂದರು.

ನೆರೆಯ ರಾಷ್ಟ್ರಗಳಲ್ಲಿ ಚಿತ್ರಹಿಂಸೆ ಅನುಭವಿಸಿ ಇಲ್ಲಿಗೆ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ಕಲ್ಪಿಸಲು ಈ ಕಾಯ್ದೆ ಜಾರಿಗೆ ತರಲಾಗಿದೆ. ಭಾರತದಿಂದ ಯಾವೊಬ್ಬ ಅಲ್ಪಸಂಖ್ಯಾತರೂ ಅಸುರಕ್ಷತೆ ಭಾವನೆಯಿಂದ ಬೇರೆ ದೇಶಕ್ಕೆ ಈ ರೀತಿ ವಲಸೆ ಹೋಗಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ. ಇದನ್ನು ಅಲ್ಪಸಂಖ್ಯಾತರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಅಭಿಯಾನದ ಅಂಗವಾಗಿ ಅವರು ಜ್ಞಾನಪೀಠ ಪುರಸ್ಕೃತ ಸಾಹಿತಿ  ಡಾ.ಚಂದ್ರಶೇಖರ ಕಂಬಾರ ಅವರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದರು. ಬಳಿಕ ಪ್ರದೇಶ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಹೆಬ್ಬಾರ್, ಹಿರಿಯ ಚಲನಚಿತ್ರ ನಟಿಯರಾದ ಗಿರಿಜಾ ಲೋಕೇಶ್ , ವೈದ್ಯ ರುದ್ರೇಶ್ ರವರ ಮನೆಗೆ ಭೇಟಿ ನೀಡಿ, ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ವಿವರಿಸಿದರು.

SCROLL FOR NEXT