ರಾಜಕೀಯ

ಹೈಕಮಾಂಡ್'ಗೆ ದೆಹಲಿ ಗದ್ದುಗೆ ಚಿಂತೆ: ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ ಸಾಧ್ಯತೆ

Manjula VN

ಬೆಂಗಳೂರು: ಜಾರ್ಖಾಂಡ್ ಚುನಾವಣೆ ಬಳಿಕ ಬಿಜೆಪಿ ಕೇಂದ್ರೀಯ ನಾಯಕತ್ವ ಇದಿಗ ದೆಹಲಿ ಚುನಾವಣೆಯತ್ತ ಗಮನ ಹರಿಸಿದ್ದು, ಇದರ ಪರಿಣಾಮ ರಾಜ್ಯ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾದ್ಯತೆಗಳಿವೆ. 

ಸಂಪುಟ ವಿಸ್ತರಣೆ ಕುರಿತು ಶೀಘ್ರದಲ್ಲಿಯೇ ರಾಜಧಾನಿ ದೆಹಲಿಗೆ ತೆರಳಿದ್ದು, ಹೈಕಮಾಂಡ್ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸುತ್ತೇನೆಂದು ಈ ಹಿಂದೆ ಯಡಿಯೂರಪ್ಪ ಅವರು ಹೇಳಿದ್ದರು. ಆದರೆ, ಕೇಂದ್ರೀಯ ನಾಯಕತ್ವ ಇದಕ್ಕೆ ಗ್ರೀನ್ ಸಿಗ್ನಲ್ ನೀಡುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. 

ಉಪಚುನಾವಣೆ ಬಳಿಕ ಅನರ್ಹ ಶಾಸಕರು ಹಾಗೂ ಪಕ್ಷದ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡುವ ಕುರಿತು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಆದರೆ, ಕೇಂದ್ರದ ಹಿರಿಯ ನಾಯಕರಿಗೆ ದೆಹಲಿ ಚುನಾವಣೆ ಅತ್ಯಂತ ಮುಖ್ಯವಾಗಿದ್ದು, ಕರ್ನಾಟಕ ಸಂಪುಟ ವಿಸ್ತರಣೆ ಪ್ರಾಮುಖ್ಯತೆಯ ಪಟ್ಟಿಯಲ್ಲಿಲ್ಲ ಎಂದು ಹೇಳಲಾಗುತ್ತಿದೆ. 

ಬಜೆಟ್ ಹಾಗೂ ಸಂಪುಚ ವಿಸ್ತರಣೆ ಕರಿತು ಚರ್ಚೆ ನಡೆಸುವ ಸಲುವಾಗಿ ಜನವರಿ 1-12ರಂದು ದೆಹಲಿಗೆ ಭೇಟಿ ನೀಡಲಿದ್ದು, ಗೃಹ ಸಚಿವರು, ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆಂದು ಯಡಿಯೂರಪ್ಪ ಅವರು ಹೇಳಿದ್ದಾರೆ. 

SCROLL FOR NEXT